ಕರಾವಳಿಕ್ರೈಂ

ಊಟಿಯಲ್ಲಿ ಭೀಕರ ಕಾರು ಅಪಘಾತ:ಮೈಸೂರಿನ ಬಿಜೆಪಿ ಮುಖಂಡ ಸಾವು,ನಾಲ್ವರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರು

ನ್ಯೂಸ್ ನಾಟೌಟ್ : ಕಾರೊಂದು ಅಪಘಾತಕ್ಕೀಡಾಗಿ ಬಿಜೆಪಿ ಮುಖಂಡನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.ಸ್ವಾಮಿಗೌಡ ಮೃತ ದುರ್ದೈವಿ.

ಊಟಿಯಲ್ಲಿ ಕಾರು ಅಪಘಾತ ಸಂಭವಿಸಿದೆ. ದುರಂತದಲ್ಲಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ನಿಧನರಾಗಿದ್ದಾರೆ.ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಚಲಿಸುತ್ತಿದ್ದ ಕಾರು ಪಲ್ಟಿಯಾಗಿತ್ತು ಎಂದು ವರದಿಯಾಗಿದೆ. ಸ್ನೇಹಿತರ ಕುಟುಂಬದ ಜೊತೆ ಸ್ವಾಮಿಗೌಡ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದ್ದು, ಅಪಘಾತದಲ್ಲಿ ಸ್ವಾಮಿಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.ಇವರೊಂದಿಗೆ ನಾಲ್ವರು ಮಕ್ಕಳು ಪ್ರಯಾಣಿಸುತ್ತಿದ್ದು,ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಗಾಯಾಳುಗಳನ್ನು ಊಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Related posts

ರಾತ್ರೋರಾತ್ರಿ ಹಿಂದೂ ಯುವತಿಯನ್ನು ಭೇಟಿಯಾಗಲು ಬಂದ ಮುಸ್ಲಿಂ ಯುವಕ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದವರಿಗಾಗಿ ಪೊಲೀಸರ ಶೋಧ!

ಮಡಿಕೇರಿ: ಸರ್ಕಾರಿ ಬಸ್ ಮತ್ತು ಆಂಬ್ಯುಲೆನ್ಸ್ ನಡುವೆ ಅಪಘಾತ..! 3 ಮಂದಿ ಆಸ್ಪತ್ರೆಗೆ ದಾಖಲು..!

ಪರಿಹಾರ ಕೊಡುವಂತೆ ಒತ್ತಾಯಿಸಿ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ..! ಇಲ್ಲಿದೆ ವಿಡಿಯೋ