ಕರಾವಳಿಕಾಸರಗೋಡುಕ್ರೈಂ

ಕಾಸರಗೋಡು : ವಿದ್ಯಾರ್ಥಿನಿಯ ನಿಗೂಢ ಸಾವು

388

ನ್ಯೂಸ್‌ನಾಟೌಟ್‌: ಕಾಸರಗೋಡು ಜಿಲ್ಲೆಯ ಬಂದಡ್ಕದ ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿನಿಯನ್ನು ಬಂದಡ್ಕ ಮಾಲಕುಂಡ ಇಲ್ಲತಿಂಗಲ್‌ ನಿವಾಸಿ ಸುಜಾತಾ ಎಂಬವರ ಪುತ್ರಿ ಕೆ.ವಿ.ಶರಣ್ಯಾ (17) ಎಂದು ಗುರುತಿಸಲಾಗಿದೆ. ಈಕೆ ಬಂದಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ. ಸುಜಾತಾ ಸೋಮವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಗಿಲು ಮುಚ್ಚಿದ್ದ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಶರಣ್ಯಾಳ ಮೃತದೇಹ ಪತ್ತೆಯಾಗಿದೆ. ಮಂಚದಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತೆನ್ನಲಾಗಿದೆ. ಈ ಬಗ್ಗೆ ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.

See also  ಧಾರಾಕಾರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ..! ಹಲವೆಡೆ ಸೇತುವೆ ಮುಳುಗಡೆ, ಕಳಸ-ಉಡುಪಿ ಸಂಪರ್ಕ ಬಂದ್‌
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget