ಕ್ರೈಂವೈರಲ್ ನ್ಯೂಸ್

ಮೈಸೂರು ದಸರಾ: ಸಿಡಿಮದ್ದು ತಾಲೀಮಿನ ವೇಳೆ ಅನಾಹುತ..! ಘಟನೆ ನಡೆದಿದ್ದು ಹೇಗೆ..? ಮುಂದೇನಾಯ್ತು?

ನ್ಯೂಸ್‌ನಾಟೌಟ್‌: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಸಿಡಿಮದ್ದು ತಾಲೀಮು ವೇಳೆ ಸಿಬ್ಬಂದಿ ಗಾಯಗೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಗಾಯಗೊಂಡ ಸಿಬ್ಬಂದಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ಸಂಜೆ ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವ ಸಂಬಂಧ ತಾಲೀಮು ನಡೆಸಲಾಗುತ್ತಿತ್ತು. ಈ ವೇಳೆ ಸಿಬ್ಬಂದಿಗಳು ಸಿಡಿಮದ್ದು ಸಿಡಿಸಿ ರಿಹರ್ಸಲ್​ ನಡೆಸುತ್ತಿದ್ದರು.

ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತಿತ್ತು. ಈ ವೇಳೆ ಸಿಡಿಮದ್ದು ಸಿಡಿದು ಸಿಬ್ಬಂದಿಗೆ ಸುಟ್ಟ ಗಾಯಗಳಾಗಿವೆ.
ಸಿಬ್ಬಂದಿಯನ್ನು ತಕ್ಷಣವೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಜಂಬೂಸವಾರಿಯಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿದ್ದ ಗಜಪಡೆಗಳಿಗೆ ಕಳೆದ ಎರಡು ತಿಂಗಳುಗಳಿಂದ ವಿವಿಧ ತಾಲೀಮು ನಡೆಸಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗಳು ಭಾನುವಾರ ಅಂತಿಮ ಹಂತದ ತಾಲೀಮನ್ನು ಯಶಸ್ವಿಯಾಗಿ ನಡೆಸಿತು. ಕುಶಾಲತೋಪು ಸಿಡಿಸುವ ಮೂಲಕ ಜಂಬೂಸವಾರಿ ಪುಷ್ಪಾರ್ಚನೆ ತಾಲೀಮು ನಡೆಸಲಾಯಿತು.

ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯ ಸುತ್ತಲೂ ಸಾರ್ವಜನಿಕರ ಪ್ರವೇಶ ತಡೆಯಲು ವಿಶೇಷ ಪೊಲೀಸ್ ತುಕಡಿ ನಿಯೋಜಿಸಲಾಗುತ್ತಿದೆ. ಇದಲ್ಲದೇ, ಅರಮನೆಯಲ್ಲಿ ಭದ್ರತಾ ದೃಷ್ಟಿಯಿಂದ ಕಮಾಂಡೋ ಪಡೆಗಳ ತುಕಡಿಗಳನ್ನು ನೇಮಿಸಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳು, ಅಶ್ವಪಡೆ, ಶಸ್ತ್ರಸಜ್ಜಿತ ಪೊಲೀಸ್ ತುಕಡಿಗಳು ಕೂಡ ಅಂತಿಮ ಸುತ್ತಿನ ಪೂರ್ವಾಭ್ಯಾಸ ನಡೆಸಿದವು.

Related posts

ಅಂಗನವಾಡಿಗೆ ನುಗ್ಗಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ..! ಅಡುಗೆ ಸಹಾಯಕಿಯ ಗಂಡನಿಂದ ಕೃತ್ಯ..!

ಆತ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದು ದೇವಸ್ಥಾನಕ್ಕೆ ಓಡಿದ್ದ..! ಸಿಸಿಟಿವಿ ದೃಶ್ಯ ನೀಡಿದ ಸುಳಿವೇನು?

ಮಂದಿರದೊಳಗೆ ವೇದಿಕೆ ಕುಸಿದು ಮಹಿಳೆ ದುರಂತ ಅಂತ್ಯ, ಅನುಮತಿ ಇಲ್ಲದ ಕಾರ್ಯಕ್ರಮಕ್ಕೆ ಪೊಲೀಸರೇ ಕಾವಲು..!