ಕರಾವಳಿರಾಜಕೀಯರಾಜ್ಯವೈರಲ್ ನ್ಯೂಸ್

ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಾಂಕ ಘೋಷಣೆ, ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

235

ನ್ಯೂಸ್ ನಾಟೌಟ್: ರಾಜ್ಯ ಸರ್ಕಾರ ವಿಶ್ವವಿಖ್ಯಾತ ಮೈಸೂರು ದಸರಾಗೆ (Mysuru Dasara) ದಿನಾಂಕ ಘೋಷಣೆ ಮಾಡಿದೆ. ಇದೇ ಅಕ್ಟೋಬರ್.3 ರಿಂದ ಅ.12 ರ ವರೆಗೆ ಮೈಸೂರು ದಸರಾ ಮಹೋತ್ಸವ ಜರುಗಲಿದೆ.
ಮೈಸೂರು ದಸರಾ 2024 ಉನ್ನತ ಮಟ್ಟದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಕ್ಟೋಬರ್‌ 3 ರಂದು ದಸರಾ ಉದ್ಘಾಟನೆಯಾಗಲಿದ್ದು, ಅ.12 ರಂದು ಜಂಬೂಸವಾರಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲು ಸಭೆ ನನಗೆ ಸರ್ವಾನುಮತದಿಂದ ಅನುಮತಿ ನೀಡಿದೆ. 3-4 ದಿನಗಳಲ್ಲಿ ನಾನು ಯಾರು ಅಂತಾ ಘೋಷಣೆ ಮಾಡ್ತೀನಿ. ಈ ಬಾರಿ ದಸರಾವನ್ನ ವಿಜೃಂಭಣೆಯಿಂದ, ಆಕರ್ಷಣೆಯಾಗಿ, ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ‌ ಬಾರಿ ವಾಡಿಕೆಗಿಂತ ಹೆಚ್ಚು ಮಳೆ, ಬಿತ್ತನೆ ಆಗಿದೆ‌. ರೈತರು ಹರ್ಷದಿಂದ ಇದ್ದಾರೆ‌. ಬೆಳೆ ಚೆನ್ನಾಗಿ ಬರ್ತಿದೆ‌. ಎಲ್ಲಾ ಜಲಾಶಯಗಳು ತುಂಬಿವೆ. ಕಳೆದ ವರ್ಷ ಬರ ಇತ್ತು. ಹೀಗಾಗಿ ಸರಳವಾಗಿ ಆಚರಣೆ ಮಾಡಿದ್ವಿ. ಈ‌ ಬಾರಿ ವಿಜೃಂಭಣೆಯಿಂದ ಆಚರಣೆಗೆ ತೀರ್ಮಾನ ಮಾಡಲಾಗಿದೆ ಎಂದರು.
ದೀಪಾಲಂಕಾರ ಈ ಬಾರಿ 21 ದಿನಗಳ ಕಾಲ ಇರಲಿದೆ‌. ಜಂಬೂಸವಾರಿ ಮುಗಿದ ಬಳಿಕವೂ 11 ದಿನ ದೀಪಾಲಂಕಾರ ಇರಲಿದೆ ಎಂದಿದ್ದಾರೆ.

Click

https://newsnotout.com/2024/08/chamundi-betta-mysore-kannada-news-state-govt-interfere-court-stayfe/
https://newsnotout.com/2024/08/kerala-bank-donates-50-lakh-to-wayanad-and-loans-taken-by-that-accused-are-releaf/
See also  ಯುವತಿ ಮೇಲೆ ಸರ್ಕಾರಿ ಬಸ್‌ ಹತ್ತಿಸಲು ಯತ್ನಿಸಿದ ಚಾಲಕ! ವಿಡಿಯೋ ವೈರಲ್ ಆದ ಬಳಿಕ ಚಾಲಕ ಅಮಾನತ್ತು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget