ನ್ಯೂಸ್ ನಾಟೌಟ್: ಚಾಮುಂಡಿ ಬೆಟ್ಟದಲ್ಲಿ ಏಕಾಏಕಿ ಬೆಂಕಿ ಇಂದು(ಫೆ.21) ಕಾಣಿಸಿಕೊಂಡಿದೆ. ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಯ ಕೆನ್ನಾಲಿಗೆಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಮಾಡಲಾಗುತ್ತಿದೆ.
ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ನೂರಾರು ಎಕರೆಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಮಾಡುತ್ತಿದೆ. ಆದರೆ ಬೆಂಕಿ ಹತೋಟಿಗೆ ಸಿಗುತ್ತಿಲ್ಲ. ಒಟ್ಟು ಮೂರು ಅಗ್ನಿಶಾಮಕ ವಾಹನ ದೌಡಾಯಿಸಿವೆ.
ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ಅಲ್ಲಿದ್ದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಅಗ್ನಿಶಾಮ ಸಿಬ್ಬಂದಿಗೆ ಮಾಹಿತಿ ಹೋಗಿದ್ದು, ಅವರೂ ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಕೆಲ ಪ್ರವಾಸಿಗರು ಸಹಾಯ ಮಾಡ್ತಿದ್ದಾರೆ.