Latestರಾಜ್ಯವೈರಲ್ ನ್ಯೂಸ್

ಮೈಸೂರು ಚಾಮುಂಡೇಶ್ವರಿ ದೇವಾಲಯದ ಸುತ್ತ-ಮುತ್ತ ವ್ಯಾಪಾರಕ್ಕೆ ನಿರ್ಬಂಧ..! ದೇವಾಲಯದ ಅಭಿವೃದ್ಧಿ ಪ್ರಾಧಿಕಾರದಿಂದ ಆದೇಶ

1.1k

ನ್ಯೂಸ್ ನಾಟೌಟ್: ಪ್ರತಿ ವರ್ಷ ಕೋಟ್ಯಾಂತರ ಭಕ್ತರು ಭೇಟಿ ನೀಡುವ ಸ್ಥಳ ಮೈಸೂರಿನ ಚಾಮುಂಡೇಶ್ವರಿ ದೇವಾಲಯವಾಗಿದೆ. ಈ ನಡುವೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಆದೇಶವೊಂದನ್ನು ಹೊರಡಿಸಿದೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಣೆ ಮೂಲಕ, ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯದ ಸುತ್ತಮುತ್ತಲೂ ವ್ಯಾಪಾರ ವಹಿವಾಟು ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿದೆ. ದೇವಾಲಯದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ನಿಷೇಧಿಲಾಗಿದೆ.

ದೇವಾಲಯಕ್ಕೆ ಆಗಮಿಸುವ ಗಣ್ಯರು, ಅತಿಗಣ್ಯ ವ್ಯಕ್ತಿಗಳು, ಪ್ರವಾಸಿಗರು, ವಿದೇಶಿ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಯಾವುದೇ ಅಡೆತಡೆಯಾಗದ ರೀತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚಾಮುಂಡಿ ಬೆಟ್ಟದ ಸ್ಥಳೀಯ ಗ್ರಾಮಸ್ಥರು, ವ್ಯಾಪಾರಿಗಳು, ಭಕ್ತರು ಮತ್ತು ಪ್ರವಾಸಿಗರು ಪ್ರಾಧಿಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ. ಜೆ. ರೂಪಾ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ‘ಪ್ರವಾಸಿಗರು ಮತ್ತು ಭಕ್ತರ ಅನುಕೂಲ ದೃಷ್ಟಿಯಿಂದ ಚಾಮುಂಡೇಶ್ವರಿ ದೇವಸ್ಥಾನದ ಸುತ್ತಲಿನ 100 ಮೀಟರ್ ಪ್ರದೇಶಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕಿದೆ’ ಎಂದು ಹೇಳಿದ್ದಾರೆ.

ಆರ್ ​ಸಿಬಿ, ಸಿಎಸ್ ​ಕೆ ಪಂದ್ಯದ ವೇಳೆ ಕೇವಲ 1,200 ರೂಪಾಯಿಯ ಟಿಕೆಟ್ ಗಳನ್ನು ಬರೋಬ್ಬರಿ 10,000 ರೂಪಾಯಿಗೆ ಮಾರಾಟ..! 4 ಮಂದಿ ಅರೆಸ್ಟ್..!

ನಗ್ನವಾಗಿ ರಸ್ತೆಯಲ್ಲಿ ಓಡಾಡಿದ ಬೆಂಗಳೂರು ಪಿಜಿಯೊಂದರಲ್ಲಿ ವಾಸವಿರುವ ಯುವತಿ..! ಸಾರ್ವಜನಿಕರಿಂದ ಆಕ್ರೋಶ..!

ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಿದ್ದ CRPF​ ಯೋಧ ಸೇವೆಯಿಂದ ವಜಾ..! ವೀಸಾ ಅವಧಿ ಮುಗಿದಿದ್ದರೂ ಆಕೆಯನ್ನು ಭಾರತದಲ್ಲೇ ಬಚ್ಚಿಟ್ಟಿದ್ದ ಜವಾನ..!

See also  ಚಿಕಿತ್ಸೆಗಾಗಿ ಲಂಡನ್‌ಗೆ ಹಾರಿದ ನಟಿ ರಮ್ಯಾ! ಅಷ್ಟಕ್ಕೂ ಮೋಹಕತಾರೆಗೆ ಏನಾಯ್ತು?
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget   Ad Widget