ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಮಟನ್ ಪೀಸ್‌ ಹೆಚ್ಚಿಗೆ ಹಾಕುವಂತೆ ಗ್ರಾಹಕನ ಕಿರಿಕ್..! ಕೈಯಲ್ಲಿದ್ದ ಮಟನ್ ಕತ್ತರಿಸುವ ಕತ್ತಿಯಿಂದ ತಲೆಗೆ ಹೊಡೆದ 16ರ ಬಾಲಕ..!

ನ್ಯೂಸ್ ನಾಟೌಟ್: ಬೆಳಗ್ಗೆ ಮಟನ್ ಶಾಪ್‌ಗೆ ಹೋಗಿದ್ದ ಗ್ರಾಹಕ ತಾನು ಖರೀದಿ ಮಾಡಿದ ಮಟನ್‌ ಗೆ ಒಂದೆರಡು ಪೀಸ್ ಹೆಚ್ಚಾಗಿ ಹಾಕುವಂತೆ ಗಲಾಟೆ ಮಾಡಿದ್ದಾನೆ ಈ ವೇಳೆ ಜಗಳ ನಡೆದು ಅಂಗಡಿಯಲ್ಲಿದ್ದ ಅಪ್ರಾಪ್ತ ಬಾಲಕ ಗ್ರಾಹಕನ ತಲೆಗೆ ಕತ್ತಿಯಿಂದ ಹೊಡೆದಿರುವ ಘಟನೆ ಶಿವಮೊಗ್ಗದ ಟಿಪ್ಪು ನಗರದ ಮಟನ್ ಸ್ಟಾಲ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಮಟನ್ ಅಂಗಡಿಯ ಬಳಿ ಕುಡಿದು ಗಲಾಟೆ ಮಾಡಿದ ಹಿನ್ನೆಲೆ ನಡೆದ ಹಲ್ಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಶಿವಮೊಗ್ಗದ ಗಾಡಿ ಕೊಪ್ಪದ ತಾಂಡ ನಿವಾಸಿ ಮಲ್ಲೇಶ್ (45) ಹಲ್ಲೆಗೊಳಗಾದ ವ್ಯಕ್ತಿ ಎನ್ನಲಾಗಿದ್ದು, ಕುಡಿದ ಮತ್ತಿನಲ್ಲಿ ಮಲ್ಲೇಶ್ ಮಟನ್ ಅಂಗಡಿಗೆ ಹೋಗಿದ್ದನು. ಅಂಗಡಿಯಲ್ಲಿದ್ದ 16 ವರ್ಷದ ಅಪ್ರಾಪ್ತ ಬಾಲಕನಿಗೆ ಮಟನ್ ಪಡೆದ ಮೇಲೆ ಇನ್ನೂ ಹೆಚ್ಚು ಹಾಕುವಂತೆ ಗಲಾಟೆ ಮಾಡಿದ್ದನು ಈ ವೇಳೆ ಗಲಾಟೆ ತಾರಕಕ್ಕೇರಿದ್ದು, ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಕೈಯಲ್ಲಿದ್ದ ಮಟನ್ ಕತ್ತರಿಸುವ ಕತ್ತಿಯಿಂದ ಯುವಕ ಗ್ರಾಹಕನ ತಲೆಗೆ ಹೊಡೆದಿದ್ದಾನೆ. ಹೊಡೆದ ಪರಿಣಾಮ ತಲೆಯಿಂದ ತೀವ್ರ ರಕ್ತಸ್ರಾವ ಆಗಿ ಗ್ರಾಹಕ ಕುಸಿದು ಬಿದ್ದಿದ್ದಾನೆ. ಸ್ಥಳೀಯರು ಆಂಬುಲೆನ್ಸ್ ಕರೆಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಹಲ್ಲೆ ಮಾಡಿದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.

Click 👇

https://newsnotout.com/2024/06/dowri-case-and-police-and-issue
https://newsnotout.com/2024/06/election-result-and-toll-gate-charge
https://newsnotout.com/2024/06/kannada-news-mvlvi-kannada-news-arrest

Related posts

20 ಗಂಟೆಗಳ ಸತತ ಪ್ರಯತ್ನಕ್ಕೆ ಕೊನೆಗೂ ಸಿಕ್ಕಿತು ಪ್ರತಿಫಲ..! ಬೋರ್‌ವೆಲ್‌ ನಿಂದ ಬದುಕಿಬಂದ 2 ವರ್ಷದ ಮಗು

ಪ್ರಧಾನಿ ಮೋದಿಯನ್ನು “ದಿ ಬಾಸ್” ಎಂದ ಆಸ್ಟ್ರೇಲಿಯಾ ಪ್ರಧಾನಿ..! ಆಸ್ಟ್ರೇಲಿಯಾ ಪ್ರಧಾನಿ ಅಮೇರಿಕಾದ ಗಾಯಕನನ್ನು ಮೋದಿಗೆ ಹೋಲಿಸಿದ್ದೇಕೆ?

ರಾಜಸ್ಥಾನಿ ಲೆಹರಿಯಾ ಸಾಂಪ್ರದಾಯಿಕ ಪೇಟ ಧರಿಸಿ ಧ್ವಜಾರೋಹಣ ನೆರವೇರಿಸಿದ ಮೋದಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಿದ ಪ್ರಧಾನಿ