ಕರಾವಳಿಸುಳ್ಯ

ಸುಳ್ಯ : ಪೈಚಾರು ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ನೇಮೋತ್ಸವ ಸಂಭ್ರಮ

ನ್ಯೂಸ್ ನಾಟೌಟ್ : ಶ್ರೀ ಮುತ್ತಪ್ಪ -ತಿರುವಪ್ಪ ಉತ್ಸವ ಸಮಿತಿ ಹಾಗೂ ಮುತ್ತಪ್ಪ ಮಹಿಳಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ ವರ್ಷಂಪ್ರತಿ ಜರಗುವ ಕಾಲಾವಧಿ ನೇಮೋತ್ಸವವು ಶಾಂತಿನಗರದ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಮಾರ್ಚ್ 11 ಮತ್ತು 12 ರಂದು ನಡೆಯಲಿದೆ.

ಇಂದು ಬೆಳಗ್ಗೆ ಗಣಪತಿ ಹೋಮವಾಗಿ ಸಂಜೆ 4 ರ ತನಕ ವಿವಿಧ ತಂಡಗಳಿಂದ ಭಜನೆ ಮತ್ತು ಭಜನಾ ಕುಣಿತ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಕ್ಕೆ ಪೈಂಗುತ್ತಿ ಹಾಗೂ ಶ್ರೀ ಮುತ್ತಪ್ಪ ದೈವದ ಮಲೆಯರ್ಕಲ್ ನಡೆದು ರಾತ್ರಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ರಾತ್ರಿ 8 ರಿಂದ ಶ್ರೀ ಮುತ್ತಪ್ಪ ದೈವದ ನೇಮ (ಬೆಳ್ಳಾಟಂ) ನಡೆಯಲಿದ್ದು, ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ರುಮಾಲು ಕಟ್ಟುವುದು . ಮರುದಿನ ಮಾ. 12 ಭಾನುವಾರ ಪ್ರಾತಃಕಾಲ ಶ್ರೀ ಮುತ್ತಪ್ಪ ತಿರುವಪ್ಪ ದೈವಗಳ ನೇಮೋತ್ಸವ ನಡೆಯಲಿದೆ.

Related posts

ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಪ್ರವೀಣ್ ನೆಟ್ಟಾರ್ ಪತ್ನಿ

ಸುಳ್ಯ: ವಿದ್ಯಾರ್ಥಿ ಬೆನ್ನಿಗೆ ಬಾಸುಂಡೆ, 7 ಮಂದಿ ವಿರುದ್ಧ ದೂರು

ಕೊಡಗು :ನಿಫಾ ವೈರಸ್ ಹರಡುವ ಭೀತಿ, ಕೊಡಗು ಜಿಲ್ಲೆಯಲ್ಲಿ ಹೈ ಅಲರ್ಟ್:ಜಿಲ್ಲಾಸ್ಪತ್ರೆ, ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಸಿದ್ಧತೆ ಹೇಗಿದೆ?ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ?