ಕರಾವಳಿಭಕ್ತಿಭಾವ

ಸುಳ್ಯ: ನವರಾತ್ರಿಯಂದು ದೇವಿಗೆ ತುಲಾ ಭಾರ ಸೇವೆ ಸಲ್ಲಿಸಿದ ಮುಸ್ಲಿಂ ಮಹಿಳೆ..! ಯಾವ ಕಾರಣಕ್ಕೆ ಮುಸ್ಲಿಂ ಮಹಿಳೆ ಹರಕೆ ಕಟ್ಟಿಕೊಂಡಿದ್ದರು..?

262

ನ್ಯೂಸ್ ನಾಟೌಟ್: ಶ್ರದ್ಧೆ, ಭಕ್ತಿ ಇದ್ದರೆ ಸಾಕು ಎಲ್ಲ ಧರ್ಮದಲ್ಲೂ ದೇವರನ್ನು ಕಾಣಬಹುದು. ಈ ಮಾತಿಗೆ ಸುಳ್ಯದ ಮುಸ್ಲಿಂ ಮಹಿಳೆಯೊಬ್ಬರು ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.

ಮುಸ್ಲಿಂ ಧರ್ಮೀಯರೂ ಕೂಡ ಹಿಂದೂ ಧರ್ಮದ ಆಚರಣೆಗಳನ್ನು ಒಪ್ಪಿಕೊಂಡು ಹಿಂದೂ ದೇವಾಲಯಗಳಲ್ಲಿ, ದೈವಗಳಿಗೆ ಹರಕೆ ಸಲ್ಲಿಸಿರುವ ಘಟನೆ ಇದು ಮೊದಲೇನಲ್ಲ. ಈ ಹಿಂದೆಯೂ ಇಂತಹ ಅನೇಕ ಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈ ಸಾಲಿಗೆ ಮತ್ತೊಂದು ಘಟನೆ ಕೂಡ ಸಾಕ್ಷಿಯಾಗಿರುವುದು ವಿಶೇಷ.

ಅಂದ ಹಾಗೆ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿರುವುದು ಸುಳ್ಯದ ಕಮಿಲಡ್ಕ ದುರ್ಗಾದೇವಿ ಮಂದಿರ ಮತ್ತು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದ ಸಮಯದಲ್ಲಿ ನೂರಾರು ಭಕ್ತರು ತುಲಾ ಭಾರ ಸೇವೆಯನ್ನು ದೇವಿಗೆ ಅರ್ಪಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆ ಕೂಡ ತುಲಾಭಾರ ಸೇವೆ ಸಲ್ಲಿಸಿ ತನ್ನ ಮನದಲ್ಲಿದ್ದ ಸಂಕಲ್ಪವನ್ನು ಈಡೇರಿಸಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಪ್ರಸಾದವನ್ನು ಸ್ವೀಕರಿಸಿದ್ದಾರೆ.

See also  'ನನ್ನಿಂದ ತಪ್ಪಾಗಿದೆ... ಮದುವೆಯಾದವರನ್ನು ಬಿಟ್ಟು ನನ್ನ ಜೊತೆ ಬಾ ಎಂದು ನಾನ್ ಹೇಳಿಲ್ಲ' ಸಪ್ತಮಿ ಗೌಡ ಯುವರಾಜ್ ಕುಮಾರ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡ್ರಾ..? ಇಲ್ಲಿದೆ ವೈರಲ್ ಆಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget