ಕರಾವಳಿ

ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮಾಹಿತಿ ತರಿಸಿಕೊಂಡು ಕ್ರಮ: ಆರಗ ಜ್ಞಾನೇಂದ್ರ

762

ಬೆಂಗಳೂರು: ಜಾತ್ರೆ, ರಥೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರದ ಬಗ್ಗೆ ಮಾಹಿತಿಯಿಲ್ಲ, ಮಾಹಿತಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ವಿವಾದ ಕುರಿತು ತೀರ್ಪು ಬಂದ ನಂತರ ಮುಸ್ಲಿಂ ವ್ಯಾಪಾರಿಗಳು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಬಂದ್ ಮಾಡಿದ ಘಟನೆಯ ಮುಂದುವರಿದ ಭಾಗ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧವಾಗಿದೆ. ಇದು ಸರಿಯಾದ ಕ್ರಮವಲ್ಲ ದುರದೃಷ್ಟಕರ, ಶಾಂತಿ-ಸುವ್ಯವಸ್ಥೆಗೆ ದಕ್ಕೆ ಬರಬಾರದು ಎಂದರು.

ಈ ಬಗ್ಗೆ ಮಾಹಿತಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ, ಈ ರೀತಿ ಆಗದಂತೆ ಜಾಗ್ರತೆ ವಹಿಸುತ್ತೇವೆ. ಪೊಲೀಸರು ಕಣ್ಣಿಟ್ಟು ಕಾಯುತ್ತಿದ್ದಾರೆ. ಮನಸ್ಸುಗಳನ್ನು ಒಡೆಯುವ ಕೆಲಸ ಮಾಡಬಾರದು,  ಸಮಾಜ ಒಟ್ಟಾಗಿ ಇಂಥದ್ದನ್ನೆಲ್ಲಾ ಸರಿ ಮಾಡಬೇಕು ಎಂದು ಹೇಳಿದ್ದಾರೆ.

See also  ಕೊಂಬುಗಳಿರುವ 19ನೇ ಶತಮಾನದ ಮನುಷ್ಯನ ತಲೆ ಬುರುಡೆ ಹರಾಜು..! ಬ್ರಿಟನ್ ಸರ್ಕಾರದ ಕ್ರಮಕ್ಕೆ ನಾಗಾಲ್ಯಾಂಡ್ ಸಿಎಂ ತೀವ್ರ ವಿರೋಧ.!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget