ಕರಾವಳಿ

ಹಿಂದೂ ಯುವತಿಯ ಮೈಮುಟ್ಟಿದ ಪ್ರಕರಣ: ಪೊಲೀಸ್ ಬಲೆಗೆ ಬಿದ್ದ ಆರೋಪಿ

ನ್ಯೂಸ್ ನಾಟೌಟ್ : ಹಿಂದೂ ಯುವತಿಯ ಜೊತೆ ಅನ್ಯಕೋಮಿನ ಯುವಕ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ಬುಧವಾರ ಸಂಜೆ ಘಟನೆ ನಡೆದಿತ್ತು .

ಘಟನೆ ಬಳಿಕ ಆರೋಪಿ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ನಿವಾಸಿ ಬದ್ರುದ್ದೀನ್ ಪರಾರಿಯಾಗಿದ್ದ, ಈತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಈತನ ಬಂಧಿಸುವ ತನಕ ಬಿಡುವುದಿಲ್ಲ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಬಿಗಿ ಪಟ್ಟು ಹಿಡಿದಿದ್ದರು. ಆರೋಪಿಯನ್ನು ಸೆ.15 ಗುರುವಾರ ಬೆಳಿಗ್ಗೆ 8.00 ಗಂಟೆಯ ಒಳಗೆ ಪೊಲೀಸ್‌ ಇಲಾಖೆ ಬಂಧಿಸದೇ ಇದ್ದಲ್ಲಿ ತಿಂಗಳಾಡಿ ಪೇಟೆ ಬಂದ್‌ ಮಾಡಲಾಗುತ್ತದೆ. ಜತೆಗೆ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಹಿಂದೂ ಸಂಘಟನೆಯ ಪ್ರಮುಖರು ಎಚ್ಚರಿಸಿದ್ದರು.

Related posts

ಬುರ್ಕಾ ಧರಿಸಿ ಐಟಂ ಹಾಡಿಗೆ ಮುಸ್ಲಿಂ ವಿದ್ಯಾರ್ಥಿಗಳ ಡ್ಯಾನ್ಸ್‌..!

ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಿಂದ ಪ್ರವಾಸ,ಕೇರಳದ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಭೇಟಿ

ಸ್ಕಾರ್ಫಿಯೊ ಕಾರಿನಲ್ಲಿ ಬಂದು ಶಾಸಕ ಹರೀಶ್ ಪೂಂಜಾರ ಕಾರಿನತ್ತ ತಲ್ವಾರ್ ಝಳಪಿಸಿದವ ಯಾರು?