ಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್

3ನೇ ತರಗತಿ ವಿದ್ಯಾರ್ಥಿ ಟಿಫಿನ್ ಬಾಕ್ಸ್‌ ನಲ್ಲಿ ಬಿರಿಯಾನಿ ತಂದಿದ್ದಕ್ಕೆ ಶಾಲೆಯಿಂದ ಹೊರಹಾಕಿದ ಪ್ರಾಂಶುಪಾಲ..! ಮುಸ್ಲಿಮರೆಂದು ಈ ರೀತಿ ಮಾಡಿದ್ದಾರೆ ಎಂದ ಬಾಲಕನ ತಾಯಿ..!

ನ್ಯೂಸ್‌ ನಾಟೌಟ್‌: ಶಾಲೆಗೆ ಟಿಫಿನ್ಸ್ ಬಾಕ್ಸ್‌ನಲ್ಲಿ ಬಿರಿಯಾನಿ ತಂದ 3ನೇ ತರಗತಿಯ ಬಾಲಕನನ್ನು ಶಾಲೆಯಿಂದ ಹೊರಹಾಕಿದ ಘಟನೆ ಉತ್ತರಪ್ರದೇಶದ ಬಿಜ್ನೋರ್‌ನ ಅಮ್ರೋಹಾದಲ್ಲಿ ನಡೆದಿದೆ.

ಪ್ರತಿಷ್ಠಿತ ಶಾಲೆಯೊಂದರ 3 ನೇ ತರಗತಿಯ ವಿದ್ಯಾರ್ಥಿಯು ಟಿಫಿನ್ ಬಾಕ್ಸ್‌ನಲ್ಲಿ ಬಿರಿಯಾನಿ ತಂದಿದ್ದಾನೆ. ಇದನ್ನು ನೋಡಿದ ಪ್ರಾಂಶುಪಾಲ ಆ ವಿದ್ಯಾರ್ಥಿಯನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.

ಅವಹೇಳನಕಾರಿ ಟೀಕೆ ಮಾಡಿದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಧರ್ಮದವರೆಂದು ಈ ರೀತಿ ಮಾಡಿದ್ದೀರೆ ಎಂದು ಆತನ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೊತೆಗೆ ಶಾಲೆಗೆ ಮಾಂಸಾಹಾರ ತರುವ ವಿದ್ಯಾರ್ಥಿಗಳಿಗೆ ಇಲ್ಲಿ ಶಿಕ್ಷಣ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಶಾಲೆಯಲ್ಲಿ ಮಾಂಸಾಹಾರ ತಿನ್ನುವ ವಿದ್ಯಾರ್ಥಿಗಳ ಮನ ಪರಿವರ್ತನೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

Related posts

ಪ್ರಿಯತಮೆಯನ್ನು ಬರ್ಬರವಾಗಿ ಕೊಲೆಗೈದ ಪ್ರಿಯಕರ , ಪೊಲೀಸರಿಗೆ ಶರಣಾದ ಆರೋಪಿ

ತಮಿಳು ಸಿನಿಮಾದಲ್ಲಿ ನಟಿಸಲಿರುವ ರೂಪೇಶ್ ಶೆಟ್ಟಿ, ಖ್ಯಾತ ನಟ ಯೋಗಿ ಬಾಬು ಜೊತೆ ಕನ್ನಡ ಬಿಗ್ ​ಬಾಸ್ ವಿನ್ನರ್

ಮಹಾಕುಂಭ ಮೇಳದ ಕಾಲ್ತುಳಿತದಲ್ಲಿ ಸತ್ತವರ ಶವಗಳನ್ನು ನದಿಗೆ ಎಸೆಯಲಾಗಿದೆ ಎಂದ ಜಯಾ ಬಚ್ಚನ್..! ಸರ್ಕಾರದ ಅಂಕಿ-ಅಂಶಗಳ ಬಗ್ಗೆ ಅನುಮಾನ..?