ಕ್ರೈಂರಾಜ್ಯವೈರಲ್ ನ್ಯೂಸ್

ಮುಸ್ಲಿಂ ಮಹಿಳೆ ಹಿಂದೂ ವ್ಯಕ್ತಿಯ ಜೊತೆ ಇದ್ದರೆಂದು ಯುವಕರಿಂದ ದಾಳಿ..! ಆಟೋ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ..!

ನ್ಯೂಸ್ ನಾಟೌಟ್: ನೈತಿಕ ಪೊಲೀಸ್​ಗಿರಿ ಘಟನೆ ಬೀದರ್ ನ ಬಸವಕಲ್ಯಾಣದಲ್ಲಿ ವರದಿಯಾಗಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್‌ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ ಮಹಿಳೆ ಮೇಲೆ ಅದೇ ಧರ್ಮದ ಕೆಲ ಯುವಕರು ಹಲ್ಲೆ ಮಾಡಿದ ಘಟನೆ ಮೇ.೧೨ ರಂದು ಬೆಳಕಿಗೆ ಬಂದಿದೆ. ವ್ಯಕ್ತಿ ಆಟೋ ಚಾಲಕನಾಗಿದ್ದು, ಈತನ ಜೊತೆಗೆ ನೀನು ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯಾ, ಮುಸ್ಲಿಮರ ಹೆಸರು ಹಾಳು ಮಾಡುತ್ತೀಯಾ ಎಂದು ಕೆಲ ಮುಸ್ಲಿಂ ಯುವಕರು ಅದೇ ಧರ್ಮದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜನವರಿ 08ರಂದು ಸೋಮವಾರ ಹಿಂದೂ ವ್ಯಕ್ತಿ ಮತ್ತು ಮುಸ್ಲಿಂ ಮಹಿಳೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್​ನಲ್ಲಿ ತಂಗಿದ್ದರು. (hindu muslim)ಈ ವಿಚಾರ ತಿಳಿದ ಕೆಲ ಮುಸ್ಲಿಂ ಯುವಕರು ಏಕಾಏಕಿ ಹೋಟೆಲ್​ಗೆ ನುಗ್ಗಿ ದಾಂಧಲೆ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಈ ಘಟನೆಯ ಎರಡು ವಿಡಿಯೋ ವೈರಲ್ ಆಗಿತ್ತು.ಆ ಬಳಿಕ ಆರೋಪಿಗಳು ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಕೇಳಿಬರುತ್ತಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Click 👇

https://newsnotout.com/2024/05/pavithra-jayaram-kannada-news-car-actress
https://newsnotout.com/2024/05/mother-and-baby-in-forest-kannada-news
https://newsnotout.com/2024/05/uppinangady-theft-police

Related posts

ಹೃದಯಾಘಾತದಿಂದ ನಟ ಪುನೀತ್ ರಾಜ್ ಕುಮಾರ್ ನಿಧನ

ರಾಮ ಮಂದಿರದಲ್ಲಿ ಹಿಂದುಳಿದ ವರ್ಗದ ಅರ್ಚಕರು..! ಏನಿದು ಕ್ರಾಂತಿಕಾರಿ ನಡೆ..?

ಆ್ಯಂಬುಲೆನ್ಸ್‌ಗೆ ಕೊಡಲು ಹಣವಿಲ್ಲದೆ ಮಗಳ ಶವವನ್ನು ಬೈಕ್‌ನಲ್ಲೇ ಸಾಗಿಸಿದ ತಂದೆ…!