ದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಸಂಗೀತ ಕ್ಷೇತ್ರದ ಮಾಂತ್ರಿಕ ಎ.ಆರ್ ರೆಹಮಾನ್ ಬಾಳಲ್ಲಿ ಬಿರುಗಾಳಿ..! ವಿಚ್ಛೇದನ ಘೋಷಿಸಿದ ಎ.ಆರ್ ರೆಹಮಾನ್ ಪತ್ನಿ ಸಾಯಿರಾ ಬಾನು..!

ನ್ಯೂಸ್ ನಾಟೌಟ್ : ಭಾರತೀಯ ಚಲನಚಿತ್ರ ಕ್ಷೇತ್ರದ ಸಂಗೀತ ಸಂಯೋಜಕ ಎ.ಆರ್ ರೆಹಮಾನ್ ಪತ್ನಿ ಸಾಯಿರಾ ಬಾನು ಅಧಿಕೃತವಾಗಿ ವಿಚ್ಛೇದನ ಘೋಷಿಸಿದ್ದಾರೆ. ಸಾಯಿರಾ ಪರ ವಕೀಲರಾದ ವಂದನಾ ಶಾ ಈ ಸಂಬಂಧ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

“ವಿವಾಹವಾದ ಹಲವು ವರ್ಷಗಳ ಬಳಿಕ, ಸಾಯಿರಾ ಅವರು ಪತಿ ಎ.ಆರ್.ರಹ್ಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಅವರ ಸಂಬಂಧದಲ್ಲಿ ಮಹತ್ವದ ಭಾವನಾತ್ಮಕ ಸಂಘರ್ಷದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಪರಸ್ಪರ ನಡುವೆ ಗಾಢ ಪ್ರೀತಿ ಇದ್ದರೂ, ಉದ್ವಿಗ್ನತೆ ಮತ್ತು ಕಠಿಣ ಪರಿಸ್ಥಿತಿಗಳು ಅವರಿಬ್ಬರ ನಡುವೆ ಅಂತರ ಸೃಷ್ಟಿಸಿದ್ದವು. ಇಬ್ಬರಿಗೂ ಇದನ್ನು ಬಗೆಹರಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ತೀವ್ರ ನೋವು ಮತ್ತು ದುಃಖದಿಂದ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಸಾಯಿರಾ ಒತ್ತಿ ಹೇಳಿದ್ದಾರೆ. ಜೀವನದ ಕಠಿಣ ಅಧ್ಯಾಯದಲ್ಲಿ ಮುಂದುವರಿಯಬೇಕಾದ ಈ ಸವಾಲಿನ ಸಂದರ್ಭದಲ್ಲಿ ಖಾಸಗಿತನಕ್ಕೆ ಅವಕಾಶ ಕಲ್ಪಿಸುವಂತೆ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ” ಎಂದು ವಕೀಲರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

“ಮೂವತ್ತನ್ನು ತಲುಪುವ ನಿರೀಕ್ಷೆ ನಮ್ಮದಾಗಿತ್ತು; ಆದರೆ ಅದೃಶ್ಯ ಕಾರಣಗಳಿಂದ ಕೊನೆಯಾಗುವಂತೆ ಕಾಣುತ್ತಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನ ಕೂಡಾ ಉರುಳಿದೆ. ಇಷ್ಟಾಗಿಯೂ ಈ ತುಂಡುಗಳು ಮತ್ತೆ ಜೋಡಿಕೊಳ್ಳದಿದ್ದರೂ ಈ ವಿದ್ರಾವಕ ಪರಿಸ್ಥಿತಿಯಲ್ಲಿ ನಾವು ಅರ್ಥವನ್ನು ಕಂಡುಕೊಳ್ಳುತ್ತೇವೆ. ಸ್ನೇಹಿತರೇ, ಜೀವನದ ಈ ಕಠಿಣ ಅಧ್ಯಾಯವನ್ನು ದಾಟುತ್ತಿರುವ ನಮ್ಮ ಖಾಸಗಿತನವನ್ನು ಗೌರವಿಸುತ್ತಿರುವ ನಿಮ್ಮ ಕರುಣೆಗೆ ಧನ್ಯವಾದಗಳು” ಎಂದು ಎ.ಆರ್ ರೆಹಮಾನ್ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Click

https://newsnotout.com/2024/11/notice-lokayukta-sp-kannada-news-sm-siddaramayya/

Related posts

ಪ್ರಜ್ವಲ್ ರೇವಣ್ಣನನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಕೋರ್ಟ್..! 6 ದಿನದ ವಿಚಾರಣೆಯಲ್ಲಿ ಅಧಿಕಾರಿಗಳಿಗೆ ತಿಳಿದದ್ದೇನು..?

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಕಾವಿ ತೆಗೆದು ಟೀ ಶರ್ಟ್ ಧರಿಸಿ ಒಡಿಶಾ ರೈಲಿನಲ್ಲಿದ್ದ ಹಾಲಶ್ರೀ ಪೊಲೀಸ್ ಬಲೆಗೆ! ಇಲ್ಲಿದೆ ಪೊಲೀಸರ ರೋಚಕ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ

ಶಾಲಾ ಬಾಲಕಿಯ ಸೈಕಲ್ ಹಿಂಬಾಲಿಸಿ ರಸ್ತೆಯಲ್ಲಿ ಅನುಚಿತವಾಗಿ ವರ್ತಿಸಿದ ಪೊಲೀಸ್ ಅಮಾನತ್ತು! ಇಲ್ಲಿದೆ ವೈರಲ್ ವಿಡಿಯೋ