ಕರಾವಳಿ

ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಪ್ರಕರಣ,ಒಬ್ಬಳ ಮೇಲಿನ ದ್ವೇಷಕ್ಕೆ ಈ ಕೃತ್ಯ ನಡೆಯಿತೇ?ಯಾರೀತ ಹಂತಕ?

226

ನ್ಯೂಸ್ ನಾಟೌಟ್ : ಇಡೀ ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿರುವ ಘೋರ ಘಟನೆಯೊಂದು ಉಡುಪಿಯ ಸಂತೆಕಟ್ಟೆ ಸಮೀಪದ ನೇಜಾರು ಎಂಬಲ್ಲಿ ಸಂಭವಿಸಿತ್ತು.ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನವೆಂಬರ್ 12 ಭಾನುವಾರದಂದು ನಡೆದಿತ್ತು.ಇದೀಗ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ತನಿಖೆಗೆ ಮುಂದಾಗಿರುವ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.

ಒಬ್ಬಳ ಮೇಲಿನ ದ್ವೇಷಕ್ಕೆ ಇನ್ನೂ ಮೂವರು ಬಲಿಯಾಗಿವ ಅಂಶ ಇದೀಗ ಬೆಳಕಿಗೆ ಬಂದಿದೆ. ತಾಯಿ ಹಸೀನಾ (46), ಅಫ್ನಾನ್ (23), ಅಯ್ನಾಝ್ (21) ಹಾಗೂ ಆಸಿಂನನ್ನು (12) ದುಷ್ಕರ್ಮಿಯೊಬ್ಬ ಮಾರಕಾಸ್ತ್ರಗಳಿಂದ ಇರಿದು ಕೊಲೆ (Murder) ಮಾಡಿದ್ದ.ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅಫ್ನಾನ್ ಮೇಲಿನ ದ್ವೇಷಕ್ಕೆ ದುಷ್ಕರ್ಮಿ ಇನ್ನೂ ಮೂವರನ್ನು ಕೊಲೆ ಮಾಡಿದ್ದಾನೆ ಅನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.ಅಫ್ನಾನ್ ಏರ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಯ್ನಾಝ್ ಲಾಜಿಸ್ಟಿಕ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದರು. ಆಸಿಂ 8ನೇ ತರಗತಿಯಲ್ಲಿ ಓದುತ್ತಿದ್ದ. ತಾಯಿ ಹಸೀನಾ ಗೃಹಿಣಿಯಾಗಿದ್ದರು. ಕಳೆದ ರಾತ್ರಿ ಅಫ್ನಾನ್ ರಜೆ ಹಿನ್ನೆಲೆ ಉಡುಪಿಗೆ ಬಂದಿದ್ದು, ಹಂತಕ ಬೆಂಗಳೂರಿನಿಂದ ಬಂದಿರುವ ಶಂಕೆ ಮೂಡಿದೆ.ಸಾಕ್ಷ್ಯ ನಾಶಮಾಡುವ ಸಲುವಾಗಿ ಉಳಿದ ಮೂವರನ್ನೂ ಕೊಲೆ ಮಾಡಿದ್ದಾನೆ ಎನ್ನುವ ವಿಚಾರ ಹೊರ ಬಿದ್ದಿದೆ.

ಆಟೋ ಚಾಲಕ ಶ್ಯಾಮ್ ಹೇಳಿದಂತೆ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ನಡೆಸಿದ ಹಂತಕನನ್ನು ತಾನೇ ಕರೆದುಕೊಂಡು ಅವರ ಮನೆಗೆ ಬಿಟ್ಟಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ನಾನು ಸಂತೆಕಟ್ಟೆ ಆಟೋ ಡ್ರೈವರ್. ಹೂವಿನ ಮಾರ್ಕೆಟ್ ಬಳಿ ನನ್ನ ಆಟೋ ಸ್ಟ್ಯಾಂಡ್‌ ಇದೆ. ಆತ ತೃಪ್ತಿ ಲೇಔಟ್ ಹತ್ತಿರ ಬಿಡುವಂತೆ ಹೇಳಿದ್ದ. ನಾನು ಆತನನ್ನು ಹೇಳಿದೆಡೆಗೆ ತಂದು ಬಿಟ್ಟೆ. ಆ ವ್ಯಕ್ತಿಯನ್ನು ಮನೆಗೆ ಬಿಟ್ಟು 15 ನಿಮಿಷದಲ್ಲಿ ಮತ್ತೆ ಸಂತೆಕಟ್ಟೆಯಲ್ಲಿ ಕಾಣಿಸಿಕೊಂಡಿದ್ದಾನೆ ಎನ್ನುವ ಮಾಹಿತಿ ನೀಡಿದ್ದಾರೆ. 

ಆ ವ್ಯಕ್ತಿ ಬೆಂಗಳೂರು ಭಾಗದ ಕನ್ನಡವನ್ನು ಮಾತನಾಡುತ್ತಿದ್ದ. ಕರಾವಳಿ ಕನ್ನಡ ಆತ ಮಾತನಾಡುತ್ತಿರಲಿಲ್ಲ. ಕೃತ್ಯ ನಡೆಸಿ ಅಪರಿಚಿತರ ಬೈಕಿನಲ್ಲಿ ವಾಪಸ್ ಸಂತೆಕಟ್ಟೆಗೆ ಬಂದಿದ್ದಾನೆ. ಆತ ಮಾಸ್ಕ್ ಹಾಕಿದ್ದು, ಬೋಳು ತಲೆ ಮತ್ತು ಬ್ಯಾಗ್‌ ಒಂದನ್ನು ಹಾಕಿಕೊಂಡಿದ್ದ ಎಂಬ ಮಾಹಿತಿಯಿದೆ. ಆತ ಟಾರ್ಗೆಟ್ ಮಾಡಿದ್ದ ಮನೆ, ತೃಪ್ತಿ ಲೇಔಟ್ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬುದು ಸ್ಪಷ್ಟವಾಗಿದೆ ಎಂದು ಚಾಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

See also  ಬಂದಾರು: ವಿಕೋಪಕ್ಕೆ ತಿರುಗಿದ ಜಾನುವಾರುಗಳ ಚರ್ಮಗಂಟು ರೋಗ, 30 ಹಸುಗಳಲ್ಲಿ 7 ಹಸುಗಳು ಸಾವು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget