ಕೊಡಗುಕ್ರೈಂ

ಕೊಡಗು: ಪತ್ನಿಗೆ ಗುಂಡಿಟ್ಟು ಹತ್ಯೆಗೈದ ಪಾಪಿ ಪತಿ..! ಬೆಚ್ಚಿ ಬೀಳಿಸುವ ಭಯಾನಕ ಘಟನೆಗೆ ಕಾರಣವೇನು?

ನ್ಯೂಸ್‌ ನಾಟೌಟ್‌: ಬಂದೂಕಿನಿಂದ ಪತಿಯೇ ಪತ್ನಿಯನ್ನು ಗುಂಡಿಟ್ಟು ಕೊಂದ ಭಯಾನಕ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಬೆಟೋಳಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಶಿಲ್ಪಾ (36) ಎಂದು ಗುರುತಿಸಲಾಗಿದೆ. ಆರೋಪಿ ಪತಿ ನಾಯಕಂಡ ಬೋಪಣ್ಣ (45) ಎಂಬಾತ ಈ ಕೃತ್ಯವೆಸಗಿದ ಬಳಿಕ ಕೋವಿಯೊಂದಿಗೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

Related posts

ಲವ್ವರ್ ಜೊತೆ ಹೆಡ್ ಕಾನ್‌ಸ್ಟೇಬಲ್‌ ಲವ್ವಿ-ಡವ್ವಿ..! ಪ್ರೇಯಸಿಗಾಗಿಯೇ ಬೇರೆ ಮನೆ ಮಾಡಿದ್ದ ಆತ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದೇಗೆ..?

ವಿಟ್ಲ: ಅನ್ಯಕೋಮಿನ ಯುವತಿ ಜೊತೆ ಯುವಕನೋರ್ವ ಅಸಭ್ಯ ವರ್ತನೆ! ಯುವಕನ ಶೀಘ್ರ ಬಂಧನಕ್ಕೆ ಆಶಾ ತಿಮ್ಮಪ್ಪ ಆಗ್ರಹ!

ಪುತ್ತೂರು : ಪಿಕಪ್ ವಾಹನ – ಬೈಕ್ ಮಧ್ಯೆ ಭೀಕರ ಅಪಘಾತ,ಸುಳ್ಯ ಜಟ್ಟಿಪಳ್ಳದ ವ್ಯಕ್ತಿ ದಾರುಣ ಸಾವು