ನ್ಯೂಸ್ ನಾಟೌಟ್: ಪುಣೆಯಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಕನಿಷ್ಠ 20 ರಿಂದ 25 ಮಂದಿ ನೀರಿನಲ್ಲೇ ಕೊಚ್ಚಿಹೋಗಿದ್ದಾರೆಂದು ವರದಿಯಾಗಿದೆ.
ತಲೆಗಾಂವ್ ಪ್ರದೇಶದ ಕುಂಡ್ಮಾಲ್ ಬಳಿ ಇಂದ್ರಯಾಣಿ ನದಿಗೆ ಕಟ್ಟಲಾಗಿದ್ದ ನಿರ್ಮಿಸಿದ್ದ ಹಳೆಯ ಸೇತುವೆ ಕೊಚ್ಚಿ ಹೋಗಿದೆ. ಮಳೆಯ ಆರ್ಭಟ ಜೋರಾದ ಹಿನ್ನೆಲೆ ಪ್ರವಾಹ ಉಂಟಾಗಿದ್ದು ದುರ್ಘಟನೆ ಸಂಭವಿಸಿದೆ. ಕನಿಷ್ಠ 20 ರಿಂದ 25 ಮಂದಿಯಲ್ಲೇ ಕೊಚ್ಚಿ ಹೋಗಿದ್ದಾರೆ ಎಂದು ಜಿಲ್ಲಾಡಳಿತ ಆತಂಕ ವ್ಯಕ್ತಪಡಿಸಿದೆ.
ಕಳೆದ ಕೆಲವು ತಿಂಗಳಿನಿಂದ ಈ ಸೇತುವೆ ಶಿಥಿಲಾವಸ್ಥೆಯಲ್ಲಿತ್ತು. ಹಾಗಾಗಿ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ಇತ್ತೀಚೆಗೆ ಭಾರೀ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಇಂದು(ಜೂ.15) ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿದ್ದು, ಸೇತುವೆ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ನದಿ ವೀಕ್ಷಣೆ ಮಾಡುತ್ತಿದ್ದ 20-25 ಮಂದಿ ನದಿಯಲ್ಲೇ ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳ್ತಂಗಡಿ:ವೇಶ್ಯಾವಾಟಿಕೆ ಶಂಕೆ ಮೇರೆಗೆ ಲಾಡ್ಜ್ ಗಳಿಗೆ ಪೊಲೀಸ್ ದಾಳಿ..! ಇಬ್ಬರು ಅರೆಸ್ಟ್..!