ನ್ಯೂಸ್ ನಾಟೌಟ್: 26/11ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ರಾಣಾ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ತುರ್ತು ತಡೆ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ರಾಣಾ ಸಲ್ಲಿಸಿದ್ದ ಅರ್ಜಿಯಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ, ಭಾರತದಲ್ಲಿ ವಿಚಾರಣೆಗೆ ಒಳಗಾಗುವಷ್ಟು ಕಾಲ ತಾನು ಬದುಕುಳಿಯುವುದಿಲ್ಲ, ಶೀಘ್ರದಲ್ಲಿ ನಾನು ಸಾವನ್ನಪ್ಪಬಹುದು. ಅಲ್ಲದೇ ಪಾಕಿಸ್ತಾನಿ ಮುಸ್ಲಿಂ ಹಾಗೂ ಮಾಜಿ ಸೇನಾಧಿಕಾರಿಯಾಗಿರುವ ಹಿನ್ನೆಲೆ ಭಾರತದಲ್ಲಿ ಹಿಂಸೆಗೆ ಒಳಗಾಗಬಹುದು ಎಂದು ಉಲ್ಲೇಖಿಸಿದ್ದರು.
ಆದರೆ ಈ ಅಂಶಗಳನ್ನು ಅಮೆರಿಕಾ ಸುಪ್ರೀಂಕೋರ್ಟ್ ಪರಿಗಣಿಸಿಲ್ಲ. ಇದರಿಂದಾಗಿ ತಹವ್ವೂರ್ ರಾಣಾಗೆ ಹಿನ್ನಡೆಯಾಗಿದೆ. ಭಾರತಕ್ಕೆ ರಾಣಾ ಹಸ್ತಾಂತರಕ್ಕೆ ಇನ್ನಷ್ಟು ಶಕ್ತಿ ಬಂದಿದ್ದು, ಭಾರತದ ವಿದೇಶಾಂಗ ಇಲಾಖೆ ಅಧಿಕಾರಿಗಳು ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದಾರೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವನು ತುಂಬಾ ದುಷ್ಟ ಎಂದು ಕರೆದು ರಾಣಾ ಗಡಿಪಾರು ಮಾಡಲು ತಮ್ಮ ಆಡಳಿತ ಅನುಮೋದನೆ ನೀಡಿದೆ ಎಂದು ಘೋಷಿಸಿದರು. 63 ವರ್ಷದ ತಹಾವೂರ್ ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನ ಜೈಲಿನಲ್ಲಿದ್ದಾನೆ.