Latestಸಿನಿಮಾ

ಈ ಸಿನಿಮಾ ಟೀಸರ್‌ ನಲ್ಲಿ ಮಲ್ಟಿ ಸ್ಟಾರ್‌ ಗಳದ್ದೇ ಅಬ್ಬರ..! ಅಕ್ಷಯ್ ಕುಮಾರ್, ಮೋಹನ್ ಲಾಲ್, ಪ್ರಭಾಸ್ ಇನ್ನೂ ಅನೇಕರು ಒಂದೇ ಸಿನಿಮಾದಲ್ಲಿ..!

829

ನ್ಯೂಸ್‌ ನಾಟೌಟ್ :ಟಾಲಿವುಡ್ ನಟ ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಟೀಸರ್ ರಿಲೀಸ್ ಆಗಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗಿರೋ ‘ಕಣ್ಣಪ್ಪ’ ಟೀಸರ್‌ ನಲ್ಲಿ ಮಲ್ಟಿ ಸ್ಟಾರ್ ಕಲಾವಿದರು ಮಿಂಚಿದ್ದಾರೆ. ಅದರಲ್ಲಿ ಪ್ರಭಾಸ್ ಹೈಲೈಟ್ ಆಗಿದ್ದಾರೆ.

ನಾಯಕನಾಗಿ ಮಂಚು ವಿಷ್ಣು, ಶಿವನಾಗಿ ಅಕ್ಷಯ್ ಕುಮಾರ್, ಪಾರ್ವತಿಯಾಗಿ ಕಾಜಲ್ ಕಾಣಿಸಿಕೊಂಡಿದ್ದಾರೆ. ಮೋಹನ್ ಬಾಬು ಜೊತೆ ಮೋಹನ್ ಲಾಲ್, ಶರತ್ ಕುಮಾರ್, ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. 150 ಕೋಟಿ ರೂ. ಬಜೆಟ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಮಾಡಲಾಗಿದೆ. ಟೀಸರ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ದಿನಾಂಕ ಘೋಷಣೆಯಾಗಲಿದೆ.

ಇತ್ತೀಚೆಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ‘ಕಣ್ಣಪ್ಪ’ ಸಿನಿಮಾ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು, ನಾಯಕ ನಟ ಮಂಚು ವಿಷ್ಣು, ನಟಿ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್‌ ಲೈನ್ ವೆಂಕಟೇಶ್, ಭಾರತಿ ವಿಷ್ಣುವರ್ಧನ್ ಕೂಡ ಭಾಗಿಯಾಗಿದ್ದರು.

See also  ಸುಳ್ಯದ ನಿವೃತ್ತ ವೈದ್ಯಾಧಿಕಾರಿ ಮಗ ನೀರಿನಲ್ಲಿ ಮುಳುಗಿ ಸಾವು, ವೈದ್ಯ ವಿದ್ಯಾರ್ಥಿ ವಿಧಿ ವಶ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget