Uncategorized

ಉದ್ಯಮಿ ಮುಕೇಶ್, ನೀತಾ, ಆಕಾಶ್ ಅಂಬಾನಿಗೆ ಕೊಲೆ ಬೆದರಿಕೆ

ನ್ಯೂಸ್ ನಾಟೌಟ್ :  ಉದ್ಯಮಿ ,ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಬಂದಿದೆ.

ಅಂಬಾನಿ ಒಡೆತನದ ಎಚ್‌.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಕಾಲ್ ಸೆಂಟರ್‌ಗೆ ಬುಧವಾರ ಬೆದರಿಕೆ ಕರೆ ಬಂದಿದೆ. ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಮತ್ತು ಮುಕೇಶ್, ಪತ್ನಿ ನೀತಾ ಹಾಗೂ ಮಗ ಆಕಾಶ್ ಅಂಬಾನಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಬುಧವಾರ ಮಧ್ಯಾಹ್ನ 12.57 ಮತ್ತು ಸಂಜೆ 5.04ರ ಸುಮಾರಿಗೆ ಎರಡು ಬಾರಿ ಕರೆ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೇಡ್‌ನ ವಕ್ತಾರರು ತಿಳಿಸಿದ್ದಾರೆ.

ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ.ಮುಕೇಶ್ ಅಂಬಾನಿಯವರ ಭದ್ರತೆಯನ್ನು ‘ಝೆಡ್‌‘ನಿಂದ ‘ಝೆಡ್ ಪ್ಲಸ್‌‘ಗೆ ಏರಿಸಿದ 5 ದಿನಗಳ ನಂತರ ಈ ಬೆದರಿಕೆ ಕರೆ ಬಂದಿದೆ. ನೀತಾ ಅಂಬಾನಿಯವರಿಗೆ ‘ವೈ ಪ್ಲಸ್‘ ಭದ್ರತೆ ಇದೆ. ಬೆದರಿಕೆ ಬೆನ್ನಲ್ಲೇ ಎಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಅಂಬಾನಿ ಕುಟುಂಬಕ್ಕೆ ಹೆಚ್ಚುವರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

Related posts

ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ; ಪ್ರಾಣಾಪಾಯದಿಂದ ಪಾರಾದ ಮನೆಯವರು

ಹಿಜಾಬ್ ಕುರಿತ ತೀರ್ಪು ಪ್ರಕಟಕ್ಕೆ ಕ್ಷಣಗಣನೆ

ಡಿ.8 ರಿಂದ ರಾಜ್ಯಾದ್ಯಂತ ಹಲವು ಕಡೆ ಭಾರೀ ಮಳೆ ಸಾಧ್ಯತೆ