ಚಿಕ್ಕಮಗಳೂರು

ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಆಳದ ಪ್ರಪಾತಕ್ಕೆ ಉರುಳಿದ ಕಾರು,ಹೋಟೆಲ್ ಉದ್ಯಮಿಯಾಗಿದ್ದ ಚಾಲಕ ದುರಂತ ಅಂತ್ಯ

ನ್ಯೂಸ್ ನಾಟೌಟ್ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 200 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ದುರಂತ ಅಂತ್ಯ ಕಂಡಿರುವ ಘಟನೆ ಮೂಡಿಗೆರೆ ತಾಲೂಕಿನ ಅಬ್ರುಗೋಡಿಗೆ ಸಮೀಪ ವರದಿಯಾಗಿದೆ.

ರಂಜನ್ (38) ದುರಂತ ಅಂತ್ಯ ಕಂಡ ಕಾರು ಚಾಲಕ ಎಂದು ತಿಳಿದು ಬಂದಿದೆ.ರಂಜನ್ ಜನ್ನಪುರದಲ್ಲಿ ಹೋಟೆಲ್ ನಡೆಸುತ್ತಿದ್ದರು ಎನ್ನಲಾಗಿದ್ದು, ಜನ್ನಾಪುರದಿಂದ ಕಳಸ ಕಡೆಗೆ ಹೋಗುವಾಗ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಅಬ್ರುಗೋಡಿಗೆ ತಿರುವು ಬಳಿ ತಡೆಗೋಡೆ ಇಲ್ಲದೆ ಅವಘಡ ಸಂಭವಿಸಿದೆ ಎಂದು ಹೇಳಲಾಗಿದ್ದು, ಸ್ಥಳೀಯರು ಈ ಬಗ್ಗೆ ಆರೋಪಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಹಲವು ಬಾರಿ ಈ ಭಾಗದವರು ಮನವಿ ಸಲ್ಲಿಸಿದ್ದರೂ.ಆದರೂ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ. ಸ್ಥಳಕ್ಕೆ ಬಾಳೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

https://www.youtube.com/watch?v=91Tc8e4avZ8

Related posts

ಸುಳ್ಯ : ಚಿಕ್ಕಮಗಳೂರಿನಲ್ಲಿ ಪೊಲೀಸರಿಂದ ಯುವ ವಕೀಲನ ಮೇಲೆ ದೌರ್ಜನ್ಯ, ಸುಳ್ಯದಲ್ಲಿ ವಕೀಲರಿಂದ ಪ್ರತಿಭಟನೆ

ಚಾರಣಕ್ಕೆ ಬಂದವರ ಮೇಲೆ ವರುಣನ ಅಬ್ಬರ, ಮರ ಬಿದ್ದು ಹೊಸ ಕಾರು ಜಖಂ..!

ಅಣ್ಣಾಮಲೈ ತಮಿಳುನಾಡಿನ ಸಿಎಂ ಆಗ್ತಾರೆ..!ಗೌರಿಗದ್ದೆಯ ಅವಧೂತ ವಿನಯ್‌ ಗುರೂಜಿ ಭವಿಷ್ಯ..! ಈ ಬಗ್ಗೆ ಹೇಳಿದ್ದೇನು?