ಕ್ರೈಂಸಿನಿಮಾ

‘ಮುದ್ದುಲಕ್ಷ್ಮಿ’ ಸೀರಿಯಲ್ ನಟ ಚರಿತ್ ಬಾಳಪ್ಪ ಬಂಧನ..! ಲೈಂಗಿಕ ದೌರ್ಜನ್ಯ ಆರೋಪ..!

217

ನ್ಯೂಸ್ ನಾಟೌಟ್ : ಗೆಳತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಕಿರುತೆರೆ ನಟ ಚರಿತ್ ಬಾಳಪ್ಪರನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡದ ಮುದ್ದುಲಕ್ಷ್ಮಿ, ಲವಲವಿಕೆ, ಸರ್ಪಸಂಬಂಧ ಸೇರಿದಂತೆ ತೆಲುಗಿನ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಚರಿತ್ ಬಾಳಪ್ಪ ಖ್ಯಾತಿ ಪಡೆದಿದ್ದರು.

ನಟ ಚರಿತ್‌ನನ್ನು ಆರ್‌ಆರ್ ನಗರ ಪೊಲೀಸರು ಬಂಧಿಸಿದ್ದು, ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ ಹಾಗೂ ಹಲ್ಲೆ ಮಾಡಿರುವುದಾಗಿ ನಟನ ವಿರುದ್ಧ ಯುವತಿ ಆರೋಪಿಸಿದ್ದಾರೆ.

ನಿನ್ನನ್ನ ಪ್ರೀತಿಸುತ್ತೇನೆ ಎಂದು ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾನೆ. ಜೊತೆಗೆ ಯುವತಿ ವಾಸ ಮಾಡುತ್ತಿದ್ದ ಮನೆಗೆ ನುಗ್ಗಿ ಸಹಚರರ ಜೊತೆ ಕಿರುಕುಳ ನೀಡಿದ್ದಾನೆ. ಹಣಕ್ಕೂ ಬೇಡಿಕೆಯಿಟ್ಟಿದ್ದು, ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವೀಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ನಟ ಚರಿತ್ ಹಾಗೂ ಪತ್ನಿ ಮಂಜುಶ್ರೀ ಡಿವೋರ್ಸ್ ಪಡೆದಿದ್ದರು. ಕೋರ್ಟ್ ಆಜ್ಞೆಯಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಬೆದರಿಕೆ ಹಾಕಿದ್ದಾರೆಂದು ಚರಿತ್ ವಿರುದ್ಧ ಪತ್ನಿ ಮಂಜುಶ್ರೀ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಾಗಿತ್ತು.

See also  ಬ್ರೇಕಪ್ ಮಾಡಿಕೊಂಡನೆಂದು ಆತನ ಕೈ ಬೆರಳನ್ನೇ ಕತ್ತರಿಸಿ ಫ್ರಿಜ್ ನಲ್ಲಿಟ್ಟ ಯುವತಿ..! ಏನಿದು ವಿಚಿತ್ರ ಘಟನೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget