ರಾಜಕೀಯವೈರಲ್ ನ್ಯೂಸ್

ಸಂಸದನಿಗೆ ಸಂಸತ್‌ ಬಳಿ ಕುಕ್ಕಿದ ಕಾಗೆ..! ಆಮ್‌ ಆದ್ಮಿ ಪಕ್ಷದ ಸಂಸದನ ಬಗ್ಗೆ ಬಿಜೆಪಿ ಹೇಳಿದ್ದೇನು?

ನ್ಯೂಸ್ ನಾಟೌಟ್ : ಸಂಸತ್‌ ಆವರಣದಲ್ಲಿ ರಾಜ್ಯಸಭೆ ಆಮ್‌ ಆದ್ಮಿ ಪಕ್ಷದ ಸಂಸದ ರಾಘವ್‌ ಛಡ್ಡಾ ಕಾಗೆಯೊಂದು ಕುಕ್ಕಿದೆ. ಸಂಸತ್‌ ಅಧಿವೇಶನದ ಕಲಾಪ ಮುಂದೂಡಿದ ಬಳಿಕ ಸಂಸತ್‌ ಆವರಣಕ್ಕೆ ಬಂದ ರಾಘವ್‌ ಛಡ್ಡಾ ಮೆಟ್ಟಿಲುಗಳ ಮೇಲೆ ಬಂದು ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ ಕಾಗೆಯೊಂದು ಅವರಿಗೆ ಕುಕ್ಕಿ ಹೋಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

ರಾಘವ್‌ ಛಡ್ಡಾ ಅವರು ಫೊನ್‌ನಲ್ಲಿ ಮಾತನಾಡುವಾಗ ಏಕಾಏಕಿ ಹಾರಿ ಬಂದ ಕಾಗೆಯು, ಅವರಿಗೆ ಕುಕ್ಕಿದೆ. ಇದರಿಂದ ಕೆಲಸ ನಿಮಿಷಗಳವರೆಗೆ ರಾಘವ್‌ ಛಡ್ಡಾ ಅವರು ಗಲಿಬಿಲಿಗೊಂಡಿದ್ದರು. ಕಾಗೆ ಕುಕ್ಕಿದ ಕಾರಣ ಅವರಿಗೆ ಯಾವುದೇ ಗಾಯಗಳು ಆಗಿಲ್ಲ ಎಂದು ತಿಳಿದುಬಂದಿದೆ.

ರಾಘವ್‌ ಛಡ್ಡಾ ಅವರಿಗೆ ಕಾಗೆ ಕುಕ್ಕಿರುವ ಫೋಟೊ ವೈರಲ್‌ ಆಗುತ್ತಲೇ ಬಿಜೆಪಿ ಟಾಂಗ್‌ ನೀಡಿದೆ. “ಜೂಟ್‌ ಬೋಲೆ ಕೌವಾ ಕಾಟೆ” (ಸುಳ್ಳು ಹೇಳಿದವರಿಗೆ ಕಾಗೆ ಕುಕ್ಕುತ್ತದೆ) ಎಂಬ ಗಾದೆ ಉಲ್ಲೇಖಸಿ ಬಿಜೆಪಿ ವ್ಯಂಗ್ಯ ಮಾಡಿದೆ. ಅಲ್ಲದೆ, “ನಾವು ಇದುವರೆಗೆ ಸುಳ್ಳು ಹೇಳಿದವರಿಗೆ ಕಾಗೆ ಕುಕ್ಕುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಆದರೆ, ಈಗ ಸುಳ್ಳು ಹೇಳುವವರಿಗೆ ಕಾಗೆ ಕುಕ್ಕುತ್ತದೆ ಎಂಬುದನ್ನು ನೋಡಿದ್ದೇವೆ” ಎಂದು ವ್ಯಂಗ್ಯ ಮಾಡಿದೆ.

Related posts

ಪುಟ್ಟ ಮಕ್ಕಳಿಬ್ಬರನ್ನು ಕತ್ತು ಹಿಸುಕಿ ಕೊಂದು, ತಾಯಿಯೂ ನೇಣಿಗೆ ಶರಣು..! ಪತಿ ಮತ್ತು ಕುಟುಂಬಸ್ಥರು ಪರಾರಿ..!

9 ಅಕ್ರಮ ಮಸೀದಿಗಳು ನೆಲಸಮ..! 103 ಎಕರೆ ಸರ್ಕಾರಿ ಭೂಮಿಯ ಅತಿಕ್ರಮಣದ ವಿರುದ್ಧ ಕಾರ್ಯಾಚರಣೆ..!

ಉಪೇಂದ್ರ ನಟನೆಯ ಸಿನಿಮಾದ ದೃಶ್ಯ ಲೀಕ್..! ಕೈ ಮುಗಿದು ಬೇಸರ ಹೊರಹಾಕಿದ ನಿರ್ದೇಶಕ..!