ಕಾಸರಗೋಡು

ಲೋಕಸಭಾ ಚುನಾವಣೆಗೆ ಕಾಸರಗೋಡಿನಿಂದ ಅಶ್ವಿನಿ ಅಭ್ಯರ್ಥಿ, ಬ್ಲಾಕ್‌ ಪಂಚಾಯತ್‌ ಸದಸ್ಯೆಗೆ ಅವಕಾಶ ಸಿಕ್ಕಿದ್ದೇಗೆ..?

34
Spread the love

ನ್ಯೂಸ್‌ ನಾಟೌಟ್‌: 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ 195 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಶನಿವಾರ ಬಿಡುಗಡೆಗೊಂಡಿದೆ. ವಿಶೇಷವೆಂದರೆ ಈ ಬಾರಿ ಕೆಲವು ಹೊಸ ಮುಖಗಳಿಗೆ ಪಕ್ಷ ಅವಕಾಶ ನೀಡಿದೆ.

ಕೇರಳದ ಕಾಸಗೋಡು ಕ್ಷೇತ್ರದಿಂದ ಅಶ್ವಿನಿ ಎಂಎಲ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಪಜ್ವ ನಿವಾಸಿಯಾಗಿರುವ ಅಶ್ವಿನಿ, ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಸದಸ್ಯೆ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿದ್ದಾರೆ. ಕೆಲವು ಸಮಯ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದರು.

ಬಿಜೆಪಿ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ  ಹಲವು ಪ್ರಮುಖರಿಗೆ ಟಿಕೆಟ್ ನೀಡಲಾಗಿದೆ. ಈ ಪಟ್ಟಿಯಲ್ಲಿ 34 ಸಚಿವರು ಇದ್ದಾರೆ. ಈ ಪೈಕಿ 28 ಮಹಿಳೆಯರು, 2ಮಾಜಿ ಸಿಎಂಗಳು ಇದ್ದಾರೆ. 50 ವರ್ಷದ ಕೆಳಗಿನ 47 ಅಭ್ಯರ್ಥಿಗಳು ಇದ್ದಾರೆ. 27 ಮಂದಿ ಎಸ್ ಸಿ ಸಮುದಾಯದವರು ಇದ್ದಾರೆ. ಕರ್ನಾಟಕದಲ್ಲಿನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

See also  ಸುಳ್ಯ: ಇಬ್ಬರು ಪುರುಷರು, ಓರ್ವ ಮಹಿಳೆ ದಾರುಣ ಸಾವು!
  Ad Widget   Ad Widget   Ad Widget   Ad Widget