ನ್ಯೂಸ್ ನಾಟೌಟ್ : ಪ್ರೇಮಿ ಜತೆ ಪತ್ನಿಯು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಆಕೆಯ ಗಂಡ ಕಾರನ್ನೇರಿ ಕುಳಿತ ರೋಚಕ ಘಟನೆಯೊಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರು ತನ್ನ ಪತ್ನಿ ಪ್ರೇಮಿಯ ಜೊತೆ ಕಾರಿನಲ್ಲಿ ಹೋಗುತ್ತಿರುವುದನ್ನು ಗಂಡ ನೋಡಿದ್ದಾನೆ.ಈ ವೇಳೆ ಕೋಪ ಎಲ್ಲಿತ್ತೋ ಏನೋ ಚಲಿಸುತ್ತಿದ್ದ ಆ ಕಾರಿನ ಬಾನೆಟ್ ಮೇಲೆ ಮಲಗಿ ಕಾರು ನಿಲ್ಲಿಸುವಂತೆ ಕೂಗಿದ್ದಾನೆ.ಆತನ ಭಂಡ ಧೈರ್ಯ ಕಂಡು ಎಲ್ಲರೂ ಶಾಕ್‌ಗೊಳಗಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ಆಗುತ್ತಿದ್ದರೆ ಆತ ನೇರ ರಸ್ತೆಗೆ ಬಂದು ಬೀಳುತ್ತಿದ್ದನೋಏನೋ..
ಈ ಆಘಾತಕಾರಿ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜನದಟ್ಟಣೆಯ ರಸ್ತೆಯಲ್ಲಿ ಕಿಲೋಮೀಟರ್‌ಗಳಷ್ಟು ದೂರ ಆ ವ್ಯಕ್ತಿಯನ್ನು ಹೊತ್ತೊಯ್ದ ಕಾರಿನ ಮೇಲೆ ಆ ವ್ಯಕ್ತಿ ಕಾರಿನ ಬಾನೆಟ್‌ಗೆ ನೇತಾಡುತ್ತಿದ್ದ. ಕಾರು ನಿಂತ ಬಳಿಕ ತನ್ನ ಹೆಂಡತಿಯ ಪ್ರಿಯಕರನ ಜೊತೆ ಆ ವ್ಯಕ್ತಿ ಜಗಳವಾಡಿದ್ದಾನೆ ಎಂದು ತಿಳಿದು ಬಂದಿದೆ.