ಕ್ರೈಂಬೆಂಗಳೂರುವೈರಲ್ ನ್ಯೂಸ್

ವೃದ್ಧೆ ತಾಯಿಯನ್ನು ರಾತ್ರೋರಾತ್ರಿ ದೇಗುಲದೊಳಗೆ ಬಿಟ್ಟು ಓಡಿದ ಮಗಳು, ಅಳಿಯ..! ಯಾರೀ ಪಾಪಿ ಮಕ್ಕಳು..?

196
Pc Cr: public tv

ನ್ಯೂಸ್ ನಾಟೌಟ್: ವಯಸ್ಸಾದ ವೃದ್ಧೆಯನ್ನು ಮಗಳು ಹಾಗೂ ಅಳಿಯ ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟುಹೋದ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ವರದಿಯಾಗಿದೆ.
ಗ್ರೇಸಿ ಪೀಟರ್ (80) ಎಂಬ ವೃದ್ಧೆಯನ್ನು ಆಕೆಯ ಮಗಳು ಹಾಗೂ ಅಳಿಯ ರಾತ್ರಿ ವೇಳೆ ಕಾರಿನಲ್ಲಿ ಕರೆದುಕೊಂಡು ಬಂದು ರಸ್ತೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

ಪಾಪಿ ಮಗಳು ಮತ್ತು ಅಳಿಯನ ಈ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗಳು ಆಶಾ ರಾಣಿ, ಅಳಿಯ ಮಂಜುನಾಥ್ ಹಾಗೂ ಮೊಮ್ಮಕ್ಕಳ ಜೊತೆ ವೃದ್ಧೆ ದೊಮ್ಮಸಂದ್ರದಲ್ಲಿ ವಾಸವಾಗಿದ್ದರು. ಇದೀಗ ಹೆತ್ತ ತಾಯಿಯನ್ನೇ ಮಗಳು ಮತ್ತು ಅಳಿಯ ಬೀದಿಗೆ ತಳ್ಳಿದ್ದಾರೆ.

ವೃದ್ಧೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯನ್ನು ದೇವಾಲಯದ ಬಳಿ ಮಲಗಿಸಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ತಂದೆ-ತಾಯಿಯನ್ನು ಆಶ್ರಮಕ್ಕೆ ಬಿಡುವ ಮಕ್ಕಳನ್ನು ನೋಡಿದ್ದೇವೆ. ಆದರೆ ಇವರ ನಾಚಿಗೇಡಿನ ಕೆಲಸ ಎಂಥವರನ್ನೂ ಮನಕಲಕುವಂತೆ ಮಾಡುತ್ತದೆ. ವೃದ್ಧೆ ಗಾಳಿ, ಚಳಿಯಲ್ಲಿ ದೇವಾಲಯದ ಬಳಿ ಮಲಗಿದ್ದನ್ನು ನೋಡಿದ ಗ್ರಾಮಸ್ಥರು ಆಕೆಯನ್ನು ರಕ್ಷಣೆ ಮಾಡಿ ಆಶ್ರಮಕ್ಕೆ ಸೇರಿಸಿದ್ದಾರೆ ಎನ್ನಲಾಗಿದೆ.

ಇಷ್ಟು ಮಾತ್ರವಲ್ಲದೇ ಅಳಿಯ ಮಂಜುನಾಥ್ ದಿನನಿತ್ಯ ಕುಡಿದು ಬಂದು ವೃದ್ದೆಯ ಮೇಲೆ ಹ *ಲ್ಲೆ ನಡೆಸುತ್ತಿದ್ದ. ವೃದ್ಧೆಯ ಕಾಲು ಮುರಿದಿದ್ದಾರೆ ಎನ್ನಲಾಗಿದೆ. ದೇವಾಲಯದ ಬಳಿ ಮಲಗಿದ್ದ ಈ ಹಿರಿ ಜೀವವನ್ನು ಗ್ರಾಮಸ್ಥರು ಗಮನಿಸಿ ಬನ್ನೇರುಘಟ್ಟದ ಆಶ್ರಮಕ್ಕೆ ರವಾನಿಸಿದ್ದು, ವೈದ್ಯರ ಚಿಕಿತ್ಸೆಯೊಂದಿಗೆ ವೃದ್ಧೆ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

See also  ಬಂಟ್ವಾಳ: ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್..! ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget