ನ್ಯೂಸ್ ನಾಟೌಟ್: ಎರಡು ಮಕ್ಕಳ ಜೊತೆ ತಾಯಿ ಕಾಣೆಯಾಗಿರುವ ಘಟನೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.
ಸೆ.4 ರಂದು ಮುಂಜಾನೆ ಸುಮಾರು 2 ಗಂಟೆಯಿಂದ 4 ಗಂಟೆಯ ಸಮಯದಲ್ಲಿ ತನ್ನ ಎರಡು ಮಕ್ಕಳೊಂದಿಗೆ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಪತ್ನಿ ನಾಪತ್ತೆಯಾದ ಬಗ್ಗೆ ಪತಿ ಮೊಹಮ್ಮದ್ ಶರೀಫ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಲಿಸರು ಹುಡುಕಾಟ ಆರಂಭಿಸಿದ್ದಾರೆ.