ಬೆಂಗಳೂರು

ಜಗತ್ತಿನಲ್ಲಿ ಕೆಟ್ಟ ತಾಯಿ ಇಲ್ಲ ಎಂಬ ಮಾತಿಗೆ ಲೋಪ ಇವಳು, ಹೆತ್ತ ಕುಡಿಯನ್ನೇ ಕೊಂದ ಪಾಪಿ ತಾಯಿ

878

ಬೆಂಗಳೂರು: ಜಗತ್ತಿನಲ್ಲಿ ಕೆಟ್ಟ ತಾಯಂದಿರು ಇರಲಾರರು ಎಂಬ ಗಾದೆ ಮಾತೊಂದಿದೆ. ಕರುಳ ಕುಡಿಗೆ ಹೆತ್ತಮ್ಮ ಏನು ಬೇಕಾದರೂ ಮಾಡಬಲ್ಲಳು. ಆದರೆ ಅದಕ್ಕೆ ತದ್ವಿರುದ್ದ ಎಂಬಂತೆ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿರುವ 10 ವರ್ಷದ ಮಗನನ್ನೇ ಕೊಂದಿರುವ ಹೃದಯ ವಿದ್ರಾವಕ ಘಟನೆಯಿದು. ಹತ್ತು ವರ್ಷದ ಬಾಲಕನಿಗೆ ದೈಹಿಕ ಹಿಂಸೆ ನೀಡಿ ಕೊಲೆ ಮಾಡಲಾಗಿದೆ.

ನಗರದ ಮೈಕೋ ಲೇಔಟ್​ನಲ್ಲಿ ಈ ಘಟನೆ ನಡೆದಿದ್ದು, ಬಾಲಕನ ತಾಯಿಯೂ ಪ್ರಕರಣದಲ್ಲಿ ಭಾಗಿಯಾಗಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಬಾಲಕನ ತಾಯಿ, ರೌಡಿ ಶೀಟರ್​ ಸುನೀಲ್​ ಹಾಗೂ ಆತನ ಪ್ರೇಯಸಿ ಸಿಂಧು ಪ್ರಕರಣದ ಆರೋಪಿಗಳಾಗಿದ್ದು, ಪೊಲೀಸ್​ ತನಿಖೆ ವೇಳೆ ಕೊಲೆ ಹಿಂದಿನ ರಹಸ್ಯ ಬಯಲಾಗಿದೆ.ಗಂಡನಿಂದ ದೂರವಿದ್ದ ಬಾಲಕನ ತಾಯಿ ರೌಡಿ ಶೀಟರ್​ ಸುನೀಲ್​ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಮಗನಿಗೆ ಈ ವಿಚಾರ ತಿಳಿದು ಪದೇ ಪದೇ ಪ್ರಶ್ನಿಸುತ್ತಿದ್ದ ಎಂದು ಮೂವರು ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಾಲಕನ ತಾಯಿ ಸಂಬಂಧಿಕರು ಮಗನ ಬಗ್ಗೆ ಹಲವು ಬಾರಿ ವಿಚಾರಿಸಿದ ಕಾರಣ ಮೈಕ್ರೋ ಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಹಿಂದೆ ರೌಡಿಶೀಟರ್​ ಸುನೀಲ್​ ಹಾಗೂ ಆತನ ಪ್ರೇಯಸಿ ಸಿಂಧು ಮಾತ್ರ ಪ್ರಕರಣದ ಆರೋಪಿಗಳೆಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರು ತೀವ್ರ ತನಿಖೆ ನಡೆಸಿದಾಗ ತಾಯಿಯೂ ಕೊಲೆಯಲ್ಲಿ ಭಾಗಿಯಾಗಿರುವ ವಿಚಾರ ಬಯಲಾಗಿದೆ.

See also  ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಫುಡ್‌ನಲ್ಲಿ ಜೀವಂತ ಹುಳ 'ಫ್ರೀ'..!,ತೆವಳಿಕೊಂಡು ಬರುತ್ತಿರುವ ಆ ಹುಳ ಯಾವುದೆಂದು ಗುರುತಿಸಬಲ್ಲಿರಾ?ವಿಡಿಯೋ ವೀಕ್ಷಿಸಿ..
  Ad Widget   Ad Widget     Ad Widget   Ad Widget   Ad Widget   Ad Widget