ಕ್ರೈಂ

ಅನಾರೋಗ್ಯದಿಂದ ಸೊಸೆ ದಿಢೀರ್ ಸಾವು,ಶಾಕ್‌ಗೊಳಗಾದ ಅತ್ತೆ ಹೃದಯಾಘಾತಗೊಂಡು ನಿಧನ..ಏನಿದು ಹೃದಯ ವಿದ್ರಾವಕ ಘಟನೆ?

ನ್ಯೂಸ್ ನಾಟೌಟ್:ಅತ್ತೆ-ಸೊಸೆ ಅಂದ್ರೆ ಹಾವು-ಮುಂಗುಸಿ ಥರ ಇರೋದೇ ಜಾಸ್ತಿ.ಸೊಸೆ ಮಾಡಿದ ಕೆಲಸ ಅತ್ತೆಗೆ ಆಗಲ್ಲ. ಅತ್ತೆ ಮಾಡಿದ ಕೆಲಸ ಸೊಸೆಗೆ ಇಷ್ಟವಾಗುವುದಿಲ್ಲ.ಹೀಗೆ ಏನಾದರೊಂದು ವಿಷಯವನ್ನು ಕೆಣಕಿ ಮನೆಯೊಳಗೆ ಜಗಳಗಳು ನಡಿತಾನೇ ಇರುತ್ತೆ. ಆದರೆ ಮಂಡ್ಯದಲ್ಲೊಂದು ಇದರ ತದ್ವಿರುದ್ಧವಾಗಿ ಘಟನೆಯೊಂದು ನಡೆದಿದೆ. ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಶಾಕ್‌ಗೊಳಗಾಗಿ ಹೃದಯಾಘಾತವಾಗಿದೆ.

ಮಂಡ್ಯದ ಈ ಅತ್ತೆ ಸೊಸೆ, ಅಮ್ಮ-ಮಗಳಂಥಾ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಎಲ್ಲರಿಗೂ ಮಾದರಿಯಾಗಿದ್ದ ಅತ್ತೆ-ಸೊಸೆ ಇಬ್ಬರು ಇದೀಗ ಸಾವಿನಲ್ಲೂ ಒಂದಾಗಿದ್ದಾರೆ. ಮಂಡ್ಯದ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ನಡೆದಿದೆ.ಸೊಸೆ ಸುಶೀಲಾ (42) ಅನಾರೋಗ್ಯದಿಂದ ಬಳಲುತ್ತಿದ್ದರು.ಕೆಲ ದಿನಗಳ ಬಳಿಕ ಸೊಸೆ ಮೃತಪಟ್ಟ ನಂತರ ಅತ್ತೆ ಹುಚ್ಚಮ್ಮ(75) ಅವರಿಗೆ ಸುದ್ದಿ ತಲುಪಿತು. ಈ ವಿಷಯ ಕೇಳಿ ಅತ್ತೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹುಚ್ಚಮ್ಮಗೆ ಐವರು ಗಂಡು ಮಕ್ಕಳು. ಎರಡನೇ ಮಗನ ಹೆಂಡತಿಯಾಗಿದ್ದ ಸುಶೀಲಾಗೆ ಇಬ್ಬರು ಮಕ್ಕಳಿದ್ದಾರೆ. ಹುಚ್ಚಮ್ಮ ಮತ್ತು ಸುಶೀಲಾ ಅತ್ತೆ-ಸೊಸೆಯಂತೆ ಇರದೆ ತಾಯಿ‌-ಮಗಳಂತೆ ಇದ್ದರು ಎಂದು ವರದಿಯಾಗಿದೆ.ಆದರೆ, ನಿನ್ನೆ (ನ.23) ಸಂಜೆ ಸುಶೀಲಾ ಅವರು ದಿಢೀರ್ ಸಾವಿಗೀಡಾದ ಸುದ್ದಿ ಕೇಳಿದ ಹುಚ್ಚಮ್ಮ ಸಹ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾರೆ.ಅತ್ತೆ-ಸೊಸೆ ಸಾವಿನಿಂದ ಇಡೀ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.ಇಂದೇ ಇಬ್ಬರ ಅಂತ್ಯಕ್ರಿಯೆ ಒಂದೇ ಕಡೆ ನಡೆಯಲಿದೆ.

Related posts

ದಕ್ಷಿಣ ಕನ್ನಡ: ಚರ್ಚ್ ಪಾದ್ರಿ ವೃದ್ಧನ ಮೇಲೆ ಹಲ್ಲೆ ನಡೆಸಿದ್ದೇಕೆ..? ಪೊಲೀಸ್ ಠಾಣೆಗೆ ದೂರು

ಸೌಜನ್ಯ ಮನೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ, ಸೌಜನ್ಯ ತಾಯಿಗೆ ಧೈರ್ಯ ತುಂಬಿದ ಹಿಂದೂ ನಾಯಕ

ದಕ್ಷಿಣ ಕನ್ನಡ ಗಡಿ ಭಾಗದ ಕೇರಳದಲ್ಲಿ ಹಕ್ಕಿ ಜ್ವರದ ಭೀತಿ..! ಸುಳ್ಯ ಸಮೀಪದ ಜಾಲ್ಸೂರು ಸೇರಿದಂತೆ ಗಡಿ ಭಾಗಗಳಲ್ಲಿ ಕಟ್ಟೆಚ್ಚರ, ಕೋಳಿ ಮಾಂಸ ಪ್ರಿಯರು, ಮಾರಾಟಗಾರರಿಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ