ನ್ಯೂಸ್ ನಾಟೌಟ್: ಇಲ್ಲೊಬ್ಬ ಪುಟ್ಟ ಬಾಲಕ ತನ್ನಿಷ್ಟದ ಐಸ್ ಕ್ರೀಮ್ ತಾಯಿ ತಿಂದು ಖಾಲಿ ಮಾಡಿದರೆಂದು ಪೊಲೀಸರಿಗೆ ದೂರನ್ನು ನೀಡಿದ್ದಾನೆ. ಹೌದು ಮಮ್ಮಿ ಕೆಟ್ಟವ್ರು, ಅವ್ರು ನನ್ನ ಐಸ್ ಕ್ರೀಮ್ ತಿಂದಿದ್ದಾರೆ, ಅವ್ರನ್ನು ಕೂಡ್ಲೇ ಕರ್ಕೊಂಡು ಹೋಗಿ ಎಂದು ಪೊಲೀಸರಿಗೆ ಕರೆ ಮಾಡಿ ದೂರನ್ನು ನೀಡಿದ್ದು, ಪೊಲೀಸ್ ಹಾಗೂ ಬಾಲಕನ ನಡುವೆ ನಡೆದ ಈ ಹಾಸ್ಯಮಯ ಸಂಭಾಷಣೆಯ ತುಣುಕು ಇದೀಗ ವೈರಲ್ ಆಗುತ್ತಿದೆ.
ಅಮೇರಿಕದ ವಿಸ್ಕಾನ್ಸಿನ್ ನಲ್ಲಿ ನಡೆದ ಘಟನೆ ಇದಾಗಿದ್ದು, 4 ರ ಹರೆಯದ ಬಾಲಕನೊಬ್ಬ ತನ್ನ ಹೆತ್ತ ತಾಯಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾನೆ. ತಾಯಿ ತನ್ನ ಐಸ್ ಕ್ರೀಮ್ ತಿಂದು ಖಾಲಿ ಮಾಡಿದರೆಂದು 911 ಗೆ ಕರೆ ಮಾಡಿ, ಅಮ್ಮನನ್ನು ಆದಷ್ಟು ಬೇಗ ಕರ್ಕೊಂಡು ಹೋಗಿ ಎಂದು ದೂರನ್ನು ನೀಡಿದ್ದಾನೆ.
ಸಿಎನ್‌ಎನ್ ಪ್ರಕಾರ ವಿಸ್ಕಾನ್ಸಿನ್‌ನ 4 ವರ್ಷದ ಬಾಲಕನೊಬ್ಬ 911 ಗೆ ಕರೆ ಮಾಡಿ ಅಳುತ್ತಾ ಅಮ್ಮ ಐಸ್‌ಕ್ರೀಮ್ ತಿಂದಿದ್ದಾರೆ ಅವರನ್ನು ಬಂಧಿಸಿ ಎಂದು ದೂರನ್ನು ನೀಡಿದ್ದಾನೆ. ಅಳುತ್ತಾ ಪೊಲೀಸರೊಂದಿಗೆ ಮಾತನಾಡಿದ ಬಾಲಕ ನನ್ನ ಅಮ್ಮ ತುಂಬಾ ಕೆಟ್ಟವ್ರು, ನೀವು ಬಂದು ಅವ್ರನ್ನು ಕರ್ಕೊಂಡು ಹೋಗಿ ಎಂದು ಹೇಳಿದ್ದಾನೆ. ನಾನು ಅವನ ಐಸ್‌ಕ್ರೀಮ್ ತಿಂದದ್ದಕ್ಕೆ ಅಸಮಾಧಾನಗೊಂಡು ಹೀಗೆ ದೂರು ನೀಡಿದ್ದು ಎಂದು ತಾಯಿ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದು, ಮರುದಿನ ಪೊಲೀಸರೇ ಮನೆಗೆ ಬಂದು ಬಾಲಕನಿಗೆ ಐಸ್‌ಕ್ರೀಮ್ ಕೊಟ್ಟು ಹೋಗಿದ್ದಾರೆ.
(SOUND ON🔊🔊) FOUR-YEAR-OLD WISCONSIN BOY CALLS 911 ON HIS MOTHER FOR EATING HIS ICE CREAM: “MY MOMMY IS BEING BAD, COME AND GET MY MOMMY” pic.twitter.com/9BQ4JAENrn
— Poetik Flakko (@FlakkoPoetik) March 9, 2025
ಬಾಲಕ ಹಾಗೂ ಪೊಲೀಸರ ನಡುವೆ ನಡೆದ ಈ ಹಾಸ್ಯಮಯ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್ ತುಣುಕು ಹಾಗೂ ಪೊಲೀಸರಿಬ್ಬರು ಬಾಲಕನಿಗೆ ಐಸ್‌ಕ್ರೀಮ್ ಕೊಡಿಸಿ ಆತನೊಂದಿಗೆ ಕ್ಲಿಕ್ಕಿಸಿದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಸುಮಲತಾ ಅಂಬರೀಶ್ ಅನ್ನು ಅನ್ ಫಾಲೋ ಮಾಡಿದ ನಟ ದರ್ಶನ್..! ಕುತೂಹಲ ಮೂಡಿಸಿದ ಸುಮಲತಾ ಪೋಸ್ಟ್..!