Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಜುಟ್ಟು ಹಿಡಿದು ಎಳೆದಾಡಿ, ಕಚ್ಚಿ ಹೆತ್ತ ತಾಯಿಗೆ ಚಿತ್ರಹಿಂಸೆ ನೀಡಿದ ಮಗಳು..! ಮನಕಲಕುವ ವಿಡಿಯೋ ವೈರಲ್‌..!

1.5k

ನ್ಯೂಸ್‌ ನಾಟೌಟ್ : ಮಗಳೇ ತಾಯಿಗೆ ಚಿತ್ರಹಿಂಸೆ ನೀಡಿದ ಕ್ರೂರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜುಟ್ಟು ಹಿಡಿದು ಎಳೆದು, ತೊಡೆಯ ಭಾಗಕ್ಕೆ ಕಚ್ಚಿ, ಹೊಡೆದು ಬಡಿದು ತಾಯಿಯನ್ನು ಹಿಂಸಿಸಿದ್ದಾಳೆ. ತಾಯಿಗೆ ಹಿಂಸೆ ನೀಡಿದ ಪಾಪಿ ಮಗಳ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹೃದಯವಿದ್ರಾವಕ ಘಟನೆ ಹರಿಯಾಣದಲ್ಲಿ ನಡೆದಿದ್ದು, ಶೋನಿ ಕಪೂರ್‌ ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನನಗೆ ಆಘಾತವಾಗಿದೆ, ಸ್ವಂತ ತಾಯಿಗೆ ಹಿಂಸೆ ನೀಡಿದ ಮಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತಾಯಿ ಮತ್ತು ಮಗಳು ಹಾಸಿಗೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಅಳುತ್ತಾ ಕುಳಿತಿದ್ದ ತಾಯಿ ನನಗೇನು ಮಾಡಬೇಡ ಮಗಳೇ ಎಂದು ಬೇಡಿಕೊಳ್ಳುತ್ತಿದ್ದರೂ, ಕಿಂಚಿತ್ತೂ ಕರುಣೆ ತೋರದ ಮಗಳು ಆ ಬಡ ತಾಯಿಯ ಜುಟ್ಟು ಹಿಡಿದು ಎಳೆದು, ತೊಡೆಯ ಭಾಗಕ್ಕೆ ಕಚ್ಚಿ ಹೊಡೆದು ಬಡಿದು ಅತೀ ಕ್ರೂರವಾಗಿ ಕಿರುಕುಳ ನೀಡಿದ್ದಾಳೆ.

See also  ಆ್ಯಂಬುಲೆನ್ಸ್ ನೊಳಗೆ ಮಹಿಳೆಗೆ ಲೈಂಗಿಕ ಕಿರುಕುಳ..! ವಿರೋಧಿಸಿದ್ದಕ್ಕೆ ಪತಿಯ ಜೊತೆಗೆ ಆಕೆಯನ್ನು ವಾಹನದಿಂದ ಹೊರ ತಳ್ಳಿದ ಸಿಬ್ಬಂದಿ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget