ಕ್ರೈಂಬೆಂಗಳೂರು

ಮೋಸ್ಟ್‌ ವಾಂಟೆಡ್‌ ಕಳ್ಳ ಹೆಡ್ ಕಾನ್ಸ್ಟೇಬಲ್ ಮಗಳನ್ನೇ ಮದುವೆಯಾದ..! ಜೈಲಿನಲ್ಲೇ ನಕಲಿ ಕೀ ತಯಾರಿಕೆ ಕಲಿತಿದ್ದ ಈ ಕಳ್ಳ ಯಾರು..?

ನ್ಯೂಸ್ ನಾಟೌಟ್: ಕಳೆದ 20 ವರ್ಷಗಳಿಂದ ಮನೆಗಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಕಳ್ಳನನ್ನು ಸಿಸಿಬಿ ಸಂಘಟಿತ ಅಪರಾಧ ದಳ ಸೆರೆ ಹಿಡಿದಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕಾಶ್‌ ಅಲಿಯಾಸ್‌ ಬಾಲಾಜಿ (44) ಬಂಧಿತ ಎಂದು ಗುರುತಿಸಲಾಗಿದ್ದು, ನಿವೃತ್ತ ಹೆಡ್ ಕಾನ್ಸ್ಟೇಬಲ್ ಒಬ್ಬರ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದ ಈತ ಹಿಂದೆಗೂ ಜೇಲುವಾಸ ಅನುಭವಿಸಿದ್ದ ಎನ್ನಲಾಗಿದೆ.

ಇತ್ತೀಚೆಗೆ ಬಂಡೆಪಾಳ್ಯ ವ್ಯಾಪ್ತಿಯ ಮನೆಯೊಂದರಲ್ಲಿ ನಕಲಿ ಕೀ ಬಳಸಿ ಚಿನ್ನಾಭರಣ ದೋಚಿದ್ದ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆಯಾಗಿತ್ತು. ಹಲವು ಆಯಾಮಗಳಲ್ಲಿ ತನಿಖೆ ನಡೆಸಿದಾಗ ರಾಜಧಾನಿಯ ಮೋಸ್ಟ್‌ ವಾಂಟೆಡ್‌ ಮನೆಗಳ್ಳ ಪ್ರಕಾಶನ ಕೈವಾಡವಿರುವುದು ಗೊತ್ತಾಗಿತ್ತು. ಹೀಗಾಗಿ, ತಲೆಮರೆಸಿಕೊಂಡಿದ್ದ ಪ್ರಕಾಶನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಗರದಲ್ಲಿ ಆರು ಮನೆಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿ ದೋಚಿದ್ದ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಜೈಲಿಂದ ಬಿಡುಗಡೆಯಾಗಿದ್ದ ಪ್ರಕಾಧಿಶ್‌, ಆರು ಮನೆ ದೋಚುವಲ್ಲಿ ಸಫಲನಾಗಿದ್ದ. ಕದ್ದ ಆಭರಣಗಳನ್ನು ಅಡಮಾನವಿಟ್ಟು ಮೋಜು ಮಸ್ತಿ, ದುಶ್ಚಟಗಳಿಗೆ ಖರ್ಚು ಮಾಡುತ್ತಿದ್ದ. ಜೈಲಿನಲ್ಲಿ ನಕಲಿ ಕೀ ತಯಾರಿಕೆ ಬಗ್ಗೆ ಕಲಿತಿದ್ದಾಗಿ ಆಧಿರೋಪಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Click 👇

https://newsnotout.com/2024/05/hindu-muslim-marriage-issue-and-police
https://newsnotout.com/2024/05/vacancy-in-bmtc-conductor-job
https://newsnotout.com/2024/05/love-and-man-mistaken-and-police
https://newsnotout.com/2024/05/koragajja-cinema-director-sudhir-attavara

Related posts

ಜೋಕಾಲಿ ಹಗ್ಗಕ್ಕೆ ಕುತ್ತಿಗೆ ಸಿಕ್ಕಿ ಪುಟ್ಟ ಬಾಲಕನ ದುರಂತ ಅಂತ್ಯ..! 14 ರ ಬಾಲಕನನ್ನು ಕಾಪಾಡಲಾಗಲಿಲ್ಲವೇಕೆ..?

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಸೇತುವೆಯ ತಡೆಗೋಡೆಗೆ ಸರ್ಕಾರಿ ಬಸ್ ಢಿಕ್ಕಿ..! ಕೆ.ಎಸ್.ಆರ್.ಟಿ.ಸಿ ಚಾಲಕನ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ..! ರೊಚ್ಚಿಗೆದ್ದ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ನೂಕಾಟ ತಳ್ಳಾಟ..!