ಕರಾವಳಿ

ಕಾಲು ಜಾರಿ ಬಾವಿಗೆ ಬಿದ್ದ ಕೂಲಿ ಕಾರ್ಮಿಕ..!

ನ್ಯೂಸ್ ನಾಟೌಟ್: ಕೂಲಿ ಕೆಲಸಕ್ಕೆಂದು ಹೊರಟ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾನೆ. ಶುಕ್ರವಾರ ಮೂಡುಬಿದಿರೆಯ ಬೆಳುವಾಯಿಯಲ್ಲಿ ಘಟನೆ ನಡೆದಿದೆ.

ಈತ ಬಾವಿಗೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಮೂಡುಬಿದಿರೆ ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಿಸಿದ್ದಾರೆ. ಪಡುಮಾರ್ನಾಡಿನ ನಿವಾಸಿ ಶ್ರೀನಿವಾಸ(೬೦) ಎಂಬವರು ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಶ್ರೀನಿವಾಸ ಅವರು ಕೂಲಿ ಕೆಲಸಕ್ಕೆಂದು ಬೆಳುವಾಯಿಗೆ ಹೋಗಿದ್ದು ಅಲ್ಲಿ ಗೀತಾ ಕ್ಲಿನಿಕ್ ನ ಮುಂಭಾಗದಲ್ಲಿರುವ ಬಾವಿಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದರೆನ್ನಲಾಗಿದೆ.

ಅಗ್ನಿಶಾಮಕ ಠಾಣಾಧಿಕಾರಿ ಸ್ಟೀಫನ್ ಡಿ ಸಿಲ್ವಾ ಅವರ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಮಹಮ್ಮದ ಕೆ ಅಗ್ನಿಶಾಮಕ ಚಾಲಕ ಸುರೇಶ, ಅಗ್ನಿಶಾಮಕ ಪುಂಡಲೀಕ ಎನ್ ,ಗೃಹರಕ್ಷಕ ಸಿಬ್ಬಂದಿ ಆನಂದ, ಲತೇಶ್,ಸನ್ಮತ್ ಸಾರ್ವಜನಿಕರ ಸಹಕಾರದೊಂದಿಗೆ ಶ್ರೀನಿವಾಸ ಅವರನ್ನು ರಕ್ಷಿಸಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಪುತ್ತೂರು: ಮಹಿಳೆಗೆ ಮದ್ಯ ನೀಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ, ಆರ್ಯಾಪುವಿನ ಆಲಿ ಪೊಲೀಸ್ ವಶಕ್ಕೆ

ಮೇನಾಲದಲ್ಲಿ ಉರೂಸ್ ಮಾಡಿ ಸುಳ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕದಡುವ ಯತ್ನ, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಆಕ್ರೋಶ!

ಮಂಗಳೂರು : ಕಾರ್ ತೊಳೆಯಲೆಂದು ನೆಲಮಹಡಿಗೆ ತೆರಳಿದ ತಾಯಿ,ಬಾಲ್ಕನಿಯಿಂದ ಬಾಗಿ ‘ಬಕೆಟ್ ಇದೆಯೇನಮ್ಮಾ ‘ಕೇಳಿದ ಮೆಡಿಕಲ್ ವಿದ್ಯಾರ್ಥಿ ಕೆಳಕ್ಕೆ ಬಿದ್ದು ಮೃತ್ಯು