ಕಾಸರಗೋಡುಕ್ರೈಂವೈರಲ್ ನ್ಯೂಸ್

ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕೈಗೆ ತೆಂಗಿನಕಾಯಿ ಎಸೆದ ಮಂಗ..! ಕೈ ಮೂಳೆ ಮುರಿತ, ಆಸ್ಪತ್ರೆಗೆ ದಾಖಲು

220

ನ್ಯೂಸ್ ನಾಟೌಟ್: ಏನಾದರೂ ಉಪದ್ರ ಮಾಡಿದ್ರೆ ಅಣ್ಣ..ಅವನ ಕೋತಿ ಚೇಷ್ಠೆ ನೋಡು ಅಂತೇವೆ, ಆದರೆ ಇಲ್ಲೊಂದು ಕೋತಿ ಪಾತ್ರ ತೊಳೆಯುತ್ತಿದ್ದ ಮಹಿಳೆಯ ಕೈಯ ಮೇಲೆ ತೆಂಗಿನ ಕಾಯಿ ಎಸೆದು ಗಂಭೀರ ಗಾಯಗೊಳಿಸಿದೆ.

ಈ ಘಟನೆ ಕಾಸರಗೋಡಿನ ಮುಳಿಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳತ್ತಿಂಗಲ್ ಎಂಬಲ್ಲಿ ನಡೆದಿದೆ. ಕೃಷ್ಣನ್ ನಾಯರ್ ಎಂಬುವರ ಪತ್ನಿ ಸಾವಿತ್ರಿ ಅವರು ಮನೆಯ ಅಂಗಳದಲ್ಲಿ ಪಾತ್ರೆ ತೊಳೆಯುತ್ತಿದ್ದರು. ಈ ವೇಳೆ ತೆಂಗಿನ ಮರದಿಂದ ಮಂಗ ತೆಂಗಿನ ಕಾಯಿ ಕಿತ್ತು ಎಸೆದಿದೆ. ಇದರಿಂದ ಸಾವಿತ್ರಿ ಅವರ ಕೈ ಮೂಳೆ ಮುರಿದಿದೆ, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳು ನಿರಂತರವಾಗಿ ಕೃಷಿ ನಾಶ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳ ಮೇಲೆ ದಾಳಿ ಮಾಡುತ್ತಿವೆ ಎನ್ನುವ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

Click

https://newsnotout.com/2024/11/guruprasad-kananda-news-lawyer-gajadeesh-kannada-news-video/
https://newsnotout.com/2024/11/bantwal-kannada-news-bike-and-bus-collision-hospitalized/
https://newsnotout.com/2024/11/duplicate-document-creation-and-waqf-issue-bjp/
https://newsnotout.com/2024/11/online-gaming-kannada-news-guruprasad-about-director-and-jaggesh/
See also  ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಶವ ಕಾಡಿನೊಳಗೆ ಪತ್ತೆ..! ಕೊಲೆ ಮಾಡಿ ಬಿಸಾಡಿದ್ಯಾರು..?
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget