Latestಕ್ರೈಂದೇಶ-ವಿದೇಶ

ಕೋತಿಗೆಂದು ಅಪ್ಪ ಎಸೆದ ಕೊಡಲಿ ಮಗನ ಕತ್ತು ಸೀಳಿದೆ..! ಮಗುವಿನ ಸಾವಿನ ಬಗ್ಗೆ ಸಂಬಂಧಿಕರಿಗೆ ಅನುಮಾನ..!

767

ನ್ಯೂಸ್ ನಾಟೌಟ್ : ಕೋತಿಗಳನ್ನು ಓಡಿಸಲು ಎಂದು ಅಪ್ಪ ಕೈಯಲ್ಲಿದ್ದ ಕೊಡಲಿಯನ್ನು ಬೀಸಿದ್ದಾರೆ, ಅದು ತಪ್ಪಿ ಸೀದಾ ಹೋಗಿ ಪುಟ್ಟ ಮಗನ ಕತ್ತು ಸೀಳಿದ ಪರಿಣಾಮ ಮಗು ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ನಡೆದಿದೆ.

ಎರಡು ವರ್ಷದ ಮಗು ಅರವ್ ತನ್ನ ಮನೆಯಲ್ಲೇ ಆಟವಾಡುತ್ತಿದ್ದ. ಈ ವೇಳೆ ಮಂಗಗಳ ಗುಂಪೊಂದು ಅಲ್ಲಿಗೆ ಬಂದಿದೆ. ಈ ವೇಳೆ ಮಗುವಿನ ತಂದೆ ಲಖನ್ ಸಿಂಗ್ ಈ ಕೋತಿಗಳು ತನ್ನ ಮಗುವಿನ ಮೇಲೆ ದಾಳಿ ಮಾಡಬಹುದು ಎಂಬ ಭಯದಿಂದ ಕೊಡಲಿ ಬೀಸಿದ್ದಾನೆ. ಈ ವೇಳೆ ಕೊಡಲಿ ಮಗುವಿನ ಕತ್ತು ಸೀಳಿ ದುರಂತ ನಡೆದಿದೆ.

ಕೊಡಲಿ ತಾಗಿದ ಕೂಡಲೇ ಮಗುವಿನ ಚೀರಾಟ ಕೇಳಿ ಕುಟುಂಬದವು ಓಡಿ ಬಂದು ಕೂಡಲೇ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಇದಾದ ನಂತರ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡದೆ ಮಗುವಿನ ಶವವನ್ನು ಸಮಾಧಿ ಮಾಡಿದ್ದಾರೆ. ಇದು ಸಂಬಂಧಿಗಳಲ್ಲಿ ಅನುಮಾನ ಮೂಡಿಸಿದೆ. ಇದು ಆಕಸ್ಮಿಕ ಘಟನೆ ಅಲ್ಲ, ಇದೊಂದು ಕೊಲೆ, ಲಖನ್ ಸಿಂಗ್ ತನ್ನ ಹೆಂಡತಿ ಅನಿತಾ ಜೊತೆ ಕಿತ್ತಾಟ ನಡೆಸಿ ಸಿಟ್ಟಿನಲ್ಲಿ ಮಗುವನ್ನು ಕೊಂದಿದ್ದಾನೆ ಎಂದು ಘಟನೆಗೆ ಸಂಬಂಧಿಸಿದಂತೆ ಲಖನ್ ಭಾಮೈದ ಜಿತೇಂದ್ರ ಸಿಂಗ್ ಆರೋಪಿಸಿದ್ದಾರೆ.

ಸೋಮವಾರ(ಜೂ.2) ರಾತ್ರಿ ಲಖನ್ ಸಿಂಗ್ ಪತ್ನಿ ಅನಿತಾ ಜೊತೆ ಜಗಳವಾಡಿದ್ದ, ನಂತರ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಹೊಡೆದಿದ್ದ. ಇದಾದ ನಂತರ ರಾತ್ರಿಯ ಹೊತ್ತಿಗೆ ಜಗಳ ಕಡಿಮೆಯಾಗಿತ್ತು, ಆದರೆ ಮಂಗಳವಾರ ಬೆಳಗ್ಗೆ ಅದು ಮತ್ತೆ ಭುಗಿಲೆದ್ದಿತು. ಗಂಡ ಹೆಂಡತಿ ಜಗಳವಾಡುತ್ತಿದ್ದಾಗ, ಮಗು ಆರವ್ ತನ್ನ ಅಜ್ಜ ರಾಮಚಂದ್ರನ ಮಡಿಲಲ್ಲಿದ್ದನು. ಜಗಳದ ಸಮಯದಲ್ಲಿ, ಲಖನ್ ಸಿಂಗ್‌, ಆರವ್‌ ನನ್ನು ಕಸಿದುಕೊಂಡು ಕೊಡಲಿಯಿಂದ ಆತನನ್ನು ಕೊಂದಿದ್ದಾನೆ ಎಂದು ಲಖನ್ ಸಿಂಗ್ ಭಾವ ಆರೋಪಿಸಿದ್ದಾರೆ.
ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಘಟನೆಗೂ ನಮಗೂ ಸಂಬಂಧವಿಲ್ಲ ಎಂದ ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್..! ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದ ಬಗ್ಗೆ ಬಿಸಿಸಿಐ ಸ್ಪಷ್ಟನೆ..!

See also  ಸುಳ್ಯದ 'ಸೌಂದರ್ಯ ಸಿರಿ' ಸ್ನೇಹ ಶಿಕ್ಷಣ ಸಂಸ್ಥೆಗೆ ಶಿಕ್ಷಕರ ತಂಡದ ಭೇಟಿ, ಪ್ರಕೃತಿ ಮಾತೆಯ ಮಡಿಲಲ್ಲಿರುವ ಶಾಲೆಗೆ ಭಾರೀ ಮೆಚ್ಚುಗೆ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget