ಕರಾವಳಿಸುಳ್ಯ

ಸುಳ್ಯ : ಬಳ್ಪದಲ್ಲಿ ಮಂಗಗಳ ಮಾರಣಹೋಮ..!, ಏನಿದು ಅಮಾನವೀಯ ಕೃತ್ಯ?

159

ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಬಳ್ಪ ವ್ಯಾಪ್ತಿಯ ಕಮಿಲ ಕ್ರಾಸ್ ಬಳಿ ಅಮಾನವೀಯ ಘಟನೆಯೊಂದು ನಡೆದಿದೆ.ಹತ್ತಾರು ಮಂಗಗಳ ಮಾರಣಹೋಮವಾಗಿದೆ. ಈ ದುಷ್ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷಿಸಬೇಕು ಎಂಬ ಆಗ್ರಹ ಕೂಡ ಕೇಳಿ ಬಂದಿದೆ.

ಕಮಿಲ ಕ್ರಾಸ್ ಬಳಿ ರಸ್ತೆ ಸಮೀಪದ ಕೂಗಳತೆ ಅಂತರದಲ್ಲಿಯೇ ಉಸಿರು ಚೆಲ್ಲಿರುವ ಮಂಗಗಳ ರಾಶಿ ಪತ್ತೆಯಾಗಿದೆ. ಈ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಯಾರೋ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಎಂದು ಶಂಕಿಸಲಾಗಿದೆ. ಮಂಗಗಳಿಗೆ ವಿಷವುಣಿಸಿ ಇಲ್ಲವೇ , ಬೇರ್ಯಾವುದೇ ವಿಧಾನಗಳ ಮೂಲಕ ಅವುಗಳ ಪ್ರಾಣವನ್ನು ಕಸಿದು ಇಲ್ಲಿ ಹಾಕಿ ಹೋಗಿರಬಹುದೇ ಎಂದು ಅನುಮಾನಿಸಲಾಗಿದೆ.ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

See also  ಕಾರ್ಕಳ:ಕುಟುಂಬ ಸಮೇತ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget