ದೇಶ-ವಿದೇಶವೈರಲ್ ನ್ಯೂಸ್

ಕೋತಿಗಳ ಕಾದಾಟದಿಂದ ರೈಲು ಸಂಚಾರ ವಿಳಂಬ..! ಇಲ್ಲಿದೆ ವಿಚಿತ್ರ ಘಟನೆ..!

ನ್ಯೂಸ್ ನಾಟೌಟ್: ರೈಲು ನಿಲ್ದಾಣದಲ್ಲಿ ಎರಡು ಕೋತಿಗಳ ನಡುವಿನ ಕಾದಾಟದಿಂದ ಸುಮಾರು ಒಂದು ಗಂಟೆಗಳ ಕಾಲ ರೈಲಿನ ಕಾರ್ಯಾಚರಣೆಯನ್ನು ವಿಳಂಬವಾದ ಘಟನೆ ಬಿಹಾರದ ಸಮಸ್ತಿಪುರ್ ಜಂಕ್ಷನ್ ನಲ್ಲಿ ಇಂದು(ಡಿ.9) ನಡೆದಿದೆ.

ಪ್ಲಾಟ್‌ ಫಾರ್ಮ್ ಸಂಖ್ಯೆ 4 ರ ಬಳಿ ಬಾಳೆಹಣ್ಣಿಗಾಗಿ ಕೋತಿಗಳು ಜಗಳವಾಡುತ್ತಿತ್ತು. ಜಗಳ ತಾರಕ್ಕೇರಿದಂತೆ ಒಂದು ಕೋತಿ ಇನ್ನೊಂದರ ಮೇಲೆ ರಬ್ಬರ್ ತರಹದ ವಸ್ತುವನ್ನು ಎಸೆದಿದೆ. ಆ ವಸ್ತುವು ಓವರ್ಹೆಡ್ ತಂತಿಗೆ ಬಡಿದು ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಕೂಡಲೇ ತಂತಿ ತುಂಡಾಗಿ ರೈಲಿನ ಬೋಗಿಯ ಮೇಲೆ ಬಿದ್ದು ರೈಲುಗಳ ಸಂಚಾರ ಸ್ಥಗಿತಗೊಂಡಿದೆ ಎನ್ನಲಾಗಿದೆ.

ರೈಲ್ವೇ ನಿಲ್ದಾಣದ ವಿದ್ಯುತ್ ನಿರ್ವಹಣೆ ವಿಭಾಗವು ಕೂಡಲೇ ತಂತಿಯ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿತು. ಅದೇ ವೇಳೆ ಪ್ಲಾಟ್‌ ಫಾರ್ಮ್ ಸಂಖ್ಯೆ 4 ರಿಂದ ನಿರ್ಗಮಿಸಬೇಕಿದ್ದ ಬಿಹಾರ ಸಂಪರ್ಕ ಕ್ರಾಂತಿ ರೈಲು ಕೋತಿ ಜಗಳದಿಂದ ಸುಮಾರು 15 ನಿಮಿಷಗಳ ಕಾಲ ವಿಳಂಬವಾಗಿದೆ. ಇದು ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ.

Click

https://newsnotout.com/2024/12/uppinangady-nekkilady-kannada-news-ambulance-hits-home-ground/
https://newsnotout.com/2024/12/toilet-issue-kannada-news-rented-people-9-dna-test-viral-news/
https://newsnotout.com/2024/12/kananda-news-bomb-viral-news-viral-news-police/
https://newsnotout.com/2024/12/kannada-news-bus-viral-news-belagavi-viral-news-s/

Related posts

ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ದಿನಾಂಕ ವಿಸ್ತರಿಸಿದ್ದೇಕೆ ಸರ್ಕಾರ? ಯಾವತ್ತು ಕೊನೇಯ ದಿನಾಂಕ? ಇಲ್ಲಿದೆ ಸಂಪೂರ್ಣ ಮಾಹಿತಿ

ತನ್ನ ಯುಟ್ಯೂಬ್ ವಾಹಿನಿಗೆ ಸಂದರ್ಶನ ನೀಡುವಂತೆ ಪೊಲೀಸ್ ಅಧಿಕಾರಿಗೆ ಯೂಟ್ಯೂಬರ್ ನಿಂದ ಬೆದರಿಕೆ..! ಆರೋಪಿ ಅರೆಸ್ಟ್..!

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ..! ಮದುವೆ ಮನೆಯಲ್ಲಿ ಸೂತಕದ ಛಾಯೆ