ಕ್ರೈಂಬೆಂಗಳೂರುವೈರಲ್ ನ್ಯೂಸ್

ಖಾಸಗಿ ಟ್ರಸ್ಟ್‌ ಗಳಿಗೆ ಹಣ ನೀಡುವುದಾಗಿ ವಂಚನೆ..! 30 ಕೋಟಿ ರೂ. ವಶಕ್ಕೆ, 5 ಜನರ ಬಂಧನ..!

ನ್ಯೂಸ್ ನಾಟೌಟ್:  ಖಾಸಗಿ ಕಂಪನಿಗಳಿಂದ ನೀಡಬೇಕಾದ ಸಿಎಸ್‌ಆರ್‌ ಫಂಡ್ ಬ್ಲಾಕ್‌ ಮನಿಯನ್ನು ಖಾಸಗಿ ಟ್ರಸ್ಟ್‌ಗಳಿಗೆ ನೀಡುವುದಾಗಿ ವಂಚನೆ ಮಾಡುತ್ತಿದ್ದ 5 ಜನರ ಗ್ಯಾಂಗ್‌ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 30 ಕೋಟಿ ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಕ್ಷಾಂತರ ಖಾಸಗಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.

ಜೊತೆಗೆ, ಸಾವಿರಾರು ಖಾಸಗಿ ಟ್ರಸ್ಟ್‌ಗಳು ಕೂಡ ಸೇವೆ ಸಲ್ಲಿಸುತ್ತಿವೆ. ಆದರೆ, ಇಲ್ಲೊಂದು ಗ್ಯಾಂಗ್‌ ಖಾಸಗಿ ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್‌ ಫಂಡ್) ಅನ್ನು ಸಂಕಷ್ಟದಲ್ಲಿರುವ ಟ್ರಸ್ಟ್‌ಗಳಿಗೆ ನೀಡುವುದಾಗಿ ಕೋಟಿ ಕೋಟಿ ರೂ. ವಂಚನೆ ಮಾಡುತ್ತಿದ್ದು, ಈಗ ಮಾಲ್ ಸಮೇತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ.ಖಾಸಗಿ ಟ್ರಸ್ಟ್ ಗಳಿಗೆ CSR ಫಂಡ್ ನೀಡೋ ಹೆಸರಲ್ಲಿ ವಂಚಿಸ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತ ಆರೋಪಿಗಳಿಂದ 30 ಕೋಟಿ 91 ಲಕ್ಷ 61 ಸಾವಿರಕ್ಕೂ (31,91,61,000 ರೂ.) ಅಧಿಕ ಮೌಲ್ಯದ ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ. ಇನ್ನು ಐವರು ಬಂಧಿತರು ಈ ಹಿಂದೆಯೂ ಇಂತಹದೇ ಸಮಾಜ ಬಾಹಿರ ಕುಕೃತ್ಯಗಳಾದ ಗ್ಯಾಂಬ್ಲಿಂಗ್, ಹವಾಲಾ, ರೈಸ್ ಪುಲ್ಲಿಂಗ್ ಪ್ರಕರಣಗಳಲ್ಲಿ ಪಾಲ್ಗೊಂಡು ಜೈಲು ಪಾಲಾಗಿದ್ದರು. ಇನ್ನು ಜೈಲಿನಿಂದ ಹೊರಬಂದ ಗ್ಯಾಂಗ ಪುನಃ ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳಿಗೆ ವಂಚಿಸಲು ಗ್ಯಾಂಗ್ ಕಟ್ಟಿಕೊಂಡಿದ್ದರು ಎನ್ನಲಾಗಿದೆ.

Related posts

ನಿರ್ಭಯ ಪ್ರಕರಣ ನೆನಪಿಸಿದ ಬೆಂಗಳೂರಿನ ಘಟನೆ! ಪಾರ್ಕ್‌ನಲ್ಲಿ ಕುಳಿತಿದ್ದ ಮಹಿಳೆಯನ್ನು ಕಾರಿನೊಳಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ!

2000 ರೂ. ನೋಟು ವಾಪಸ್‌ ಮಾಡಲು ಮೂರೇ ದಿನ ಬಾಕಿ! ಗಡುವು ಮುಗಿದ ಮೇಲೂ ಬಾಕಿ ಇದ್ದರೆ ಏನು ಮಾಡಬೇಕು?

ಆಸ್ಟ್ರೇಲಿಯಾ ಎದುರು ಭಾರತದ ಸೋಲಿಗೆ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನೀಡಿದ ವಿಚಿತ್ರ ಕಾರಣವೇನು? ಪಾಂಡವರಿಗೂ ವಿಶ್ವಕಪ್ ಗೂ ಏನು ಸಂಬಂಧ?