ಬೆಂಗಳೂರುರಾಜಕೀಯ

ಹಣ ಏನು ತಿನ್ನೋಕೆ ಆಗುತ್ತಾ..! ಅಕ್ಕಿ ಬದಲು ಹಣ ನೀಡುವ ಸರ್ಕಾರದ ನಿರ್ಧಾರಕ್ಕೆ ನಳಿನ್ ಕುಮಾರ್ ಕಟೀಲ್ ವಿರೋಧ!

300

ನ್ಯೂಸ್ ನಾಟೌಟ್: ಅನ್ನಭಾಗ್ಯ ಯೋಜನೆಯ (Anna Bhagya Yojana) ಅಕ್ಕಿ ಬದಲು ಹಣ ಕೊಡುವ ಕಾಂಗ್ರೆಸ್ (Congress) ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಂಡನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ವಚನ ಭ್ರಷ್ಟ ಸರ್ಕಾರವಾಗಿದೆ. ಅಕ್ಕಿ ಕೊಡದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಚುನಾವಣಾ ಪೂರ್ವದಲ್ಲಿ 10 ಕೆ.ಜಿ ಅಕ್ಕಿ ಅಂದಿದ್ರು. ನಮ್ಮದು ಸೇರಿ ಒಟ್ಟು 15 ಕೆ.ಜಿ ಅಕ್ಕಿ ಕೊಡಬೇಕಿತ್ತು. ಈವಾಗ ಅಕ್ಕಿಗೆ ಹಣ ಹಾಕೋಕೆ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ ಏನು ತಿನ್ನೋಕೆ ಆಗುತ್ತಾ ಅಂತಾ ಈ ಹಿಂದೆ ಸಿದ್ದರಾಮಯ್ಯ ಹೇಳಿದ್ರು. ನಿಮಗೆ ಶಕ್ತಿ ಇದ್ರೆ 10 ಅಕ್ಕಿ ಕೊಡಬೇಕು. ಹಣ ಹಾಕುವ ಡೋಂಘಿ ರಾಜಕಾರಣ ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಬೇಕು. ಇಲ್ಲವಾದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

See also  ಶೀಘ್ರದಲ್ಲೇ 8,000 ಪೊಲೀಸ್ ಪೇದೆ ಹುದ್ದೆಗಳ ಭರ್ತಿಗೆ ತಯಾರಿ, ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget