ಕ್ರೈಂವೈರಲ್ ನ್ಯೂಸ್

ಕೇವಲ1000ಕ್ಕೆ ಬೆಟ್ಟ್ ಕಟ್ಟಿ ಮೊಮೊಸ್ ತಿಂದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದ..! ಅಷ್ಟಕ್ಕೂ 23ರ ಯುವಕನಿಗೆ ಆಗಿದ್ದೇನು?

ನ್ಯೂಸ್ ನಾಟೌಟ್: ಸ್ನೇಹಿತರು ಹೇಳಿದ್ದಾರೆ ಎಂದು ಬೆಟ್ಟಿಂಗ್ ಕಟ್ಟಿದ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. 1 ಸಾವಿರ ರೂ.ಗಾಗಿ ಬೆಟ್ ಕಟ್ಟಿ ಮೊಮೊಸ್ ತಿಂದ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ವಿಪಿನ್ ಕುಮಾರ್ ಸ್ನೇಹಿತರೊಂದಿಗೆ ಮೊಮೊಸ್ ತಿನ್ನಲು ಹೋಗಿದ್ದವನ ಈ ದುರಂತ ಅಂತ್ಯ  ಬಿಹಾರದಲ್ಲಿ ನಡೆದಿದ್ದು, ಪೂರ್ವ ಚಂಪಾರಣ್ ಜಿಲ್ಲೆಯ ಸಿಹೋರ್ವಾದಲ್ಲಿ ಮೊಬೈಲ್ ರಿಪೇರಿ ಅಂಗಡಿ ನಡೆಸುತ್ತಿದ್ದ 23 ವರ್ಷದ ವಿಪಿನ್ ಕುಮಾರ್ ಪಾಸ್ವಾನ್ ಸ್ನೇಹಿತರೊಂದಿಗೆ ಬೆಟ್ಟಿಂಗ್ ಕಟ್ಟಿ ದುರಂತ ಅಂತ್ಯ ಕಂಡಿದ್ದಾನೆ. ಈ ವೇಳೆ ಯಾರು ಹೆಚ್ಚು ಮೊಮೊಸ್ ತಿನ್ನುತ್ತಾರೋ ನೋಡೋಣವೆಂದು ಬೆಟ್ಟಿಂಗ್ ಕಟ್ಟಿದ್ದಾರೆ. ಯಾರು ಹೆಚ್ಚು ಮೊಮೊಸ್ ತಿನ್ನುತ್ತಾರೋ ಅವರಿಗೆ 1000 ರೂ. ನೀಡಲಾಗುವುದು ಅಂತಾ ಬಾಜಿ ಕಟ್ಟಿದ್ದಾರೆ.

ಈ ವೇಳೆ ಹಿಂದೆಮುಂದೆ ನೋಡದ ವಿಪಿನ್ ಕುಮಾರ್ ಸ್ನೇಹಿತರೊಂದಿಗೆ ಚಾಲೆಂಜ್ ಮಾಡಿದ್ದಾನೆ. ನಂತರ ಬರೋಬ್ಬರಿ 150 ಮೊಮೊಸ್‍ಗಳನ್ನು ಗಬಗಬನೇ ತಿಂದಿದ್ದಾನೆ. ಈ ವೇಳೆ ಆತ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸ್ಥಳದಲ್ಲೇ ಬಿದ್ದು ಒದ್ದಾಡಿದ್ದಾನೆ.ವಿಪಿನ್ ಕುಮಾರ್ ನಾಟಕ ಮಾಡುತ್ತಿರಬಹುದು ಎಂದು ಸ್ನೇಹಿತರು ಮೊದಲು ಭಾವಿಸಿದ್ದರಂತೆ. ಆದರೆ ಆತ ನಿಜವಾಗಿಯೂ ಅಸ್ವಸ್ಥನಾಗಿದ್ದಾನೆಂಬುದನ್ನು ತಿಳಿದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಅಲ್ಲಿ ವಿಪಿನ್ ಸಾವನ್ನಪ್ಪಿದ್ದಾನೆಂದು ತಿಳಿಸಿದ್ದಾರೆ. ಕೇವಲ 1 ಸಾವಿರ ರೂ.ಗಾಗಿ ಬೆಟ್ ಕಟ್ಟಿದ್ದ ವಿಪಿನ್ 150 ಮೊಮೊಸ್ ತಿಂದು ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

Related posts

‘ಪೊಗರು’ (Pogaru) ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಜತೆ ನಟಿಸಿದ್ದ ಜೋ ಲಿಂಡ್ನರ್​ ವಿಧಿ ವಶ!

ಕುಕ್ಕುಜಡ್ಕ: ಸೈಡ್ ಕೊಡೋ ವೇಳೆ ಹೊಂಡಕ್ಕೆ ಬಿದ್ದ ಶಾಲಾ ಬಸ್..! ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು..!

ಬದುಕಿದ್ದವನನ್ನು ಸತ್ತಿರುವುದಾಗಿ ಘೋಷಿಸಿ ಕೋಟ್ಯಾಂತರ ರೂ. ವಂಚನೆಗೆ ಯತ್ನ! ಆರು ವರ್ಷಗಳ ಸತತ ತನಿಖೆಯಲ್ಲಿ ಬಯಲಾಯ್ತು ರೋಚಕ ಕಹಾನಿ!