Latestದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಮೋಹನ್‌ ಲಾಲ್‌ ನಟನೆಯ ಸಿನಿಮಾ ನೋಡಲು ರಜೆ ಘೋಷಿಸಿದ ಬೆಂಗಳೂರಿನ ಕಾಲೇಜು..! ಕಾಲೇಜು ಕಡೆಯಿಂದಲೇ ಟಿಕೆಟ್‌ ಬುಕ್‌..!

930

ನ್ಯೂಸ್‌ ನಾಟೌಟ್: ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ನಟಿಸಿರುವ ʼಎಲ್‌ -2 ಎಂಪುರಾನ್‌ʼ ಇದೇ ವಾರ ರಿಲೀಸ್‌ ಆಗಲಿದೆ.

ಈ ಸಿನಿಮಾ ಮಾಲಿವುಡ್‌ ನಲ್ಲಿ ಭಾರೀ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಪ್ಯಾನ್‌ ಇಂಡಿಯಾದಲ್ಲೂ ಸಿನಿಮಾದ ಬಗ್ಗೆ ಕ್ರೇಜ್‌ ಹೆಚ್ಚಾಗಿದೆ. ಈಗಾಗಲೇ ಆನ್‌ ಲೈನ್‌ ನಲ್ಲಿ ಬಹುತೇಕ ಕಡೆ ಟಿಕೆಟ್‌ ಗಳನ್ನು ಬುಕ್‌ ಮಾಡಿಕೊಂಡು ಪ್ರೇಕ್ಷಕರು ಸಿನಿಮಾ ವೀಕ್ಷಣೆಗೆ ಕಾಯುತ್ತಿದ್ದಾರೆ.

ಸಾಮಾನ್ಯವಾಗಿ ಒಂದು ಶಿಕ್ಷಣ ಸಂಸ್ಥೆಗೆ ರಜೆ ಘೋಷಣೆ ಆಗುವುದು ಕೆಲ ಸಂದರ್ಭಗಳಿಗಷ್ಟೇ. ಆದರೆ ಇಲ್ಲೊಂದು ಕಾಲೇಜು ವಿದ್ಯಾರ್ಥಿಗಳಿಗೆ ಸಿನಿಮಾ ವೀಕ್ಷಣೆ ಮಾಡಲೆಂದೇ ರಜೆ ಘೋಷಿಸಿದೆ.

ಮೋಹನ್‌ ಲಾಲ್‌ ನಟನೆಯ ʼಎಂಪುರಾನ್‌ʼ ಸಿನಿಮಾದ ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಬೆಂಗಳೂರಿನಲ್ಲಿರುವ ದಿ ಗುಡ್ ಶೆಫರ್ಡ್ ಕಾಲೇಜ್‌ ನ ಆಡಳಿತ ಮಂಡಳಿ ತನ್ನ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ.! ಈ ಕಾರಣಕ್ಕಾಗಿಯೇ ಬೆಂಗಳೂರಿನ ಕಾಲೇಜೊಂದು ರಜೆ ಘೋಷಿಸಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ‘ಲೈಟ್ಸ್‌, ಕ್ಯಾಮೆರಾ, ಹಾಲಿಡೇ..!’ ಎಂದು ಪ್ರಕಟಣೆಯಲ್ಲಿ ಆಡಳಿತ ಮಂಡಳಿ ರಜೆ ಘೋಷಣೆ ಬಗ್ಗೆ ಹೇಳಿದೆ.

ಸಂಸ್ಥೆಯ ಚೇರ್ಮನ್‌ ಮೋಹನ್‌ಲಾಲ್‌ ಅವರ ದೊಡ್ಡ ಅಭಿಮಾನಿಯಾಗಿದ್ದು, ಅದೇ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಕಡೆಯಿಂದಲೇ ಟಿಕೆಟ್‌ ಬುಕ್‌ ಮಾಡಿಸಿದ್ದಾರೆ. ಕಾಲೇಜು ತನ್ನ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಸಹ ಏರ್ಪಡಿಸಿದ್ದು, ಆಡಳಿತ ಮಂಡಳಿಯು ರಾಜರಾಜೇಶ್ವರಿ ನಗರದ ವೈಜಿಆರ್ ಮಾಲ್‌ ನಲ್ಲಿರುವ ಮೂವೀಟೈಮ್ ಸಿನಿಮಾಸ್‌ ನಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರದರ್ಶನವನ್ನು ಕಾಯ್ದಿರಿಸಿದೆ.

ಇದನ್ನೂ ಓದಿಆಕೆಗೆ ಬಲವಂತವಾಗಿ ಮದುವೆ ಮಾಡಿಸಿದ ಕುಟುಂಬಸ್ಥರು..! ಮದುವೆಯಾದ ಎರಡೇ ವಾರಕ್ಕೆ ಪತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಪತ್ನಿ..!

See also  ಕಾಳಸಂತೆಯಲ್ಲಿ ಶವಗಳ ಅಂಗಾಂಗ ಮಾರಾಟ..! ತಪ್ಪೊಪ್ಪಿಕೊಂಡ ಹಾರ್ವರ್ಡ್‌ ವೈದ್ಯಕೀಯ ಕಾಲೇಜಿನ ವ್ಯವಸ್ಥಾಪಕ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget