ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಏಷ್ಯಾ ಕಪ್ ಫೈನಲ್ : ಸಿರಾಜ್, ಹಾರ್ದಿಕ್ ಬೌಲಿಂಗ್ ಅಬ್ಬರಕ್ಕೆ ಮುಳುಗಿದ ಲಂಕಾ..! ಕೇವಲ 50 ರನ್ ಗೆ ಆಲೌಟ್ ..!

281

ನ್ಯೂಸ್ ನಾಟೌಟ್: ಏಷ್ಯಾ ಕಪ್​ ಫೈನಲ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಅಬ್ಬರಿಸಿದ್ದಾರೆ.
ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆತಿಥೇಯ ಶ್ರೀಲಂಕಾ ತಂಡವನ್ನು ಕೇವಲ 50 ರನ್​ಗಳಿಗೆ ಆಲೌಟ್​ ಮಾಡಿದೆ. ಏಕದಿನ ಮಾದರಿಯಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡ ಬಾರಿಸಿದ ಅತ್ಯಂತ ಕನಿಷ್ಠ ಮೊತ್ತ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಭಾರತ ತಂಡದ ಪರವಾಗಿ ಮೊಹಮ್ಮದ್ ಸಿರಾಜ್​ ಜೀವನ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾದ ಬ್ಯಾಟ್ಸ್ ಮನ್ಗಳೆಲ್ಲರೂ ತರಗೆಲೆಯಂತೆ ಉದುರಿದರು. ಸಿರಾಜ್ ತಮ್ಮ 7 ಓವರ್​ಗಳ ಸ್ಪೆಲ್​ನಲ್ಲಿ 21 ರನ್​ ನೀಡಿ 6 ವಿಕೆಟ್​ ಕಬಳಿಸಿದ್ದಾರೆ.

ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಮ್ಮ 2.2 ಓವರ್​ಗಳ 3 ರನ್​ ಬಾರಿಸಿ 3 ವಿಕೆಟ್ ಪಡೆದರು.

See also  ಚಲಿಸುತ್ತಿದ್ದ ವಿಮಾನದೊಳಗೆ ಮಹಿಳೆಯರ ಕಾಳಗ! ತುರ್ತು ಭೂ ಸ್ಪರ್ಶ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget