Uncategorized

ಫ್ಯಾನ್‌ಗೆ ನೇಣು ಬಿಗಿದು ರೂಪದರ್ಶಿ ಸಾವು

ನ್ಯೂಸ್ ನಾಟೌಟ್: ಮುಂಬೈನ ಅಂಧೇರಿ ಪ್ರದೇಶದ ಹೋಟೆಲ್ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ 40 ವರ್ಷದ ರೂಪದರ್ಶಿಯೊಬ್ಬರ ಶವ ಪತ್ತೆಯಾಗಿದೆ.

ಮೃತ ಮಹಿಳೆ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೊಟೇಲ್‌ನಲ್ಲಿ ರಾತ್ರಿ ಊಟಕ್ಕೆ ಆರ್ಡರ್ ಮಾಡಿದ್ದರು. ಗುರುವಾರ ಬೆಳಿಗ್ಗೆ ಸ್ವಚ್ಛತಾ ಸಿಬ್ಬಂದಿ ಪದೇ ಪದೇ ಕರೆ ಮಾಡಿದರೂ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೊಟೇಲ್‌ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ರೂಪದರ್ಶಿ ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್‌ ಪತ್ತೆಯಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನು ಸಂತೋಷವಾಗಿಲ್ಲ. ನನಗೆ ಶಾಂತಿ ಬೇಕು’ ಎಂದು ಡೆತ್‌ನೋಟ್‌ನಲ್ಲಿ ರೂಪದರ್ಶಿ ಬರೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

Related posts

ಟೋಲ್ ಪ್ಲಾಜಾಗೆ ಗುದ್ದಿ ಆಂಬ್ಯುಲೆನ್ಸ್ ಪಲ್ಟಿ, ಮೂವರು ಸಾವು

ನಾನು ರಾಮ ಭಕ್ತ,ರಾಮನೇ ನಮ್ಮ ಮನೆ ದೇವರು..!ರಾಮನ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಮುಸ್ಲಿಂ ಶಾಸಕ ..!

ವಿದ್ಯಾರ್ಥಿಗಳಿಗೆ ಅಸಭ್ಯ ಮೆಸೇಜ್; ಶಿಕ್ಷಕ ಅಮಾನತು