ಕ್ರೈಂರಾಜ್ಯವೈರಲ್ ನ್ಯೂಸ್

ಮೊಬೈಲ್ ಟವರನ್ನೇ ಹೊತ್ತೊಯ್ದ ಕಳ್ಳರು..! ದೂರು ದಾಖಲಿಸಿದ ಕಂಪನಿ..!

250
Representative image

ನ್ಯೂಸ್ ನಾಟೌಟ್: ಖಾಲಿ ಜಾಗದಲ್ಲಿ ಅಳವಡಿಸಿದ್ದ ಮೊಬೈಲ್ ಟವರ್ ಕಳ್ಳತನವಾಗಿರುವ ವಿಚಿತ್ರ ಘಟನೆ ಶಿವಮೊಗ್ಗದ ಟಿಪ್ಪು ನಗರದಲ್ಲಿ ನಡೆದಿದೆ.

ಶಿವಮೊಗ್ಗ ಟಿಪ್ಪುನಗರದ ಖಾಲಿ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದು 2008ರಲ್ಲಿ ಮೊಬೈಲ್ ಟವ‌ರ್ ಅಳವಡಿಸಿತ್ತು. ಅದೇ ಸಂಸ್ಥೆ ಟವರ್‌ ನ ನಿರ್ವಹಣೆ ಮಾಡುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಆ ಬಳಿಕ ಸಂಸ್ಥೆಯವರು ಸ್ಥಳಕ್ಕೆ ಬಂದಾಗ ಮೊಬೈಲ್ ಟವರ್ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ.

ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟವರ್ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ಕಂಪನಿ ತಿಳಿಸಿದೆ.

Click

https://newsnotout.com/2024/10/bigboss-kannada-radha-hiregowda-kannada-news-viral-task/
https://newsnotout.com/2024/10/lawyer-jagadeesh-in-another-program-kannada-news-colors/
https://newsnotout.com/2024/10/brain-dead-kannada-news-viral-news-opration-theatre-doctor/
https://newsnotout.com/2024/10/life-hole-kannada-news-kannamangala-milk-dairy-viral-news/
See also  ಉದ್ವಿಗ್ನತೆ ಇದ್ದ ಗಡಿಯಲ್ಲಿ ಭಾರತ-ಚೀನಾ ಯೋಧರ ಹಿಂತೆಗೆತ ಪ್ರಕ್ರಿಯೆ ಇಂದಿಗೆ(ಅ.30) ಪೂರ್ಣ..! ನಾಳೆ 2 ದೇಶದ ಸೈನಿಕರು ಸಿಹಿ ಹಂಚಿ ದೀಪಾವಳಿ ಆಚರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget