ಸುಳ್ಯ

ಸುಳ್ಯದಲ್ಲಿ ಧಗಧಗ ಉರಿದ ಮೊಬೈಲ್‌ ಅಂಗಡಿ, ಬೆಲೆ ಬಾಳುವ ಫೋನ್‌ ಬೆಂಕಿಗಾಹುತಿ

ಸುಳ್ಯ: ಇಲ್ಲಿನ ಮೊಬೈಲ್ ಶಾಪ್ ವೊಂದರಲ್ಲಿ ಶನಿವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಮೊಬೈಲ್‌ ಫೋನ್‌ ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ಹಾನಿಯಾದ ಘಟನೆ ನಡೆದಿದೆ. ನಗರದ ಮುಖ್ಯ ರಸ್ತೆಯಲ್ಲಿರುವ ಗಾಂಧಿನಗರದ ದಿ ಸೆಲ್‌ ಮೊಬೈಲ್‌ ಅಂಗಡಿಯಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಆಗಿದೆ. ವೀಕೆಂಡ್ ಕರ್ಫ್ಯೂ ಆಗಿದ್ದರಿಂದ ಅಂಗಡಿ ಬಾಗಿಲು ಮುಚ್ಚಿತ್ತು. ಹೀಗಾಗಿ ಬೆಂಕಿ ಹೊತ್ತಿಕೊಂಡಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ಹೊಗೆ ಹೊರಗೆ ಬಂದಿದ್ದನ್ನು ಗಮನಿಸಿದ ಸ್ಥಳೀಯರು ಮಾಲಿಕರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರ ಸಹಾಯದೊಂದಿಗೆ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Related posts

ಸುಬ್ರಹ್ಮಣ್ಯ: ಅಣ್ಣನಿಂದಲೇ ತಮ್ಮನ ಮೇಲೆ ಹಲ್ಲೆ ಆರೋಪ , ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಸುಳ್ಯ: ಅಂಚೆಯಣ್ಣ ಅಬ್ದುಲ್ ಜಬ್ಬಾರ್ ಕುಟುಂಬಕ್ಕಾಗಿ ಹಿಂದೂಗಳಿಂದ ಹಣ ಸಂಗ್ರಹ, ಕೋಮು ಸೂಕ್ಷ್ಮ ಪ್ರದೇಶದಲ್ಲಿ ಭಾವೈಕ್ಯದ ಹೊಳೆ..!

ಪಂಜ: ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣ, ಕೊನೆಗೂ ಮಹಿಳೆಯ ಗುರುತು ಪತ್ತೆ,ಆತ್ಮಹತ್ಯೆ ಶಂಕೆ