ಕ್ರೈಂವಿಡಿಯೋವೈರಲ್ ನ್ಯೂಸ್

ರಿಪೇರಿ ಮಾಡುತ್ತಿದ್ದ ವೇಳೆ ಮೊಬೈಲ್ ಸ್ಫೋಟ..! ಇಲ್ಲಿದೆ ವೈರಲ್ ವಿಡಿಯೋ

262

ನ್ಯೂಸ್ ನಾಟೌಟ್ : ಅಂಗಡಿಯಲ್ಲಿ ಮೊಬೈಲ್ ರಿಪೇರಿ ಮಾಡುತ್ತಿದ್ದ ವೇಳೆ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದ್ದು ಅದೃಷ್ಟವಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ಆಗ್ರಾದಲ್ಲಿ ಸಂಭವಿಸಿದೆ, ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಯುವಕನೊಬ್ಬ ಅಂಗಡಿಯಲ್ಲಿ ಮೊಬೈಲ್ ರಿಪೇರಿ ಮಾಡುತ್ತಿದ್ದು, ಏಕಾಏಕಿ ಮೊಬೈಲ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಮೊಬೈಲ್ ರಿಪೇರಿ ಮಾಡುವ ವೇಳೆ ಯುವಕನಿಗೆ ಕರೆಯೊಂದು ಬಂದಿದೆ ಈ ವೇಳೆ ತನ್ನ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವೇಳೆ ಸ್ಫೋಟಗೊಂಡಿದೆ.
ಈ ಘಟನೆ ಜನವರಿ 7 ರಂದು ಪಿನಾಹತ್ ಪಟ್ಟಣದ ನಂದಗನ್ವಾನ್ ತಿರಾಹೆಯಲ್ಲಿರುವ ಅಂಕುಶ್ ಮೊಬೈಲ್ ಕೇಂದ್ರದಲ್ಲಿ ನಡೆದಿದ್ದು.

ಅಂಕುಶ್ ಶರ್ಮಾ ಎಂಬ ವ್ಯಕ್ತಿ ತನ್ನ ಅಂಗಡಿಯಲ್ಲಿ ಮೊಬೈಲ್ ರಿಪೇರಿ ನಡೆಸುತ್ತಿದ್ದ ವೇಳೆ ಆತನ ಮೊಬೈಲ್ ಗೆ ಕರೆಯೊಂದು ಬಂದಿದೆ ಈ ವೇಳೆ ಮಾತನಾಡುತ್ತಿರುವ ವೇಳೆ ರಿಪೇರಿ ನಡೆಸುತ್ತಿದ್ದ ಮೊಬೈಲ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಕೂಡಲೇ ಯುವಕ ಅಲ್ಲಿಂದ ಎದ್ದ ಪರಿಣಾಮ ದೊಡ್ಡ ಅಪಾಯ ತಪ್ಪಿದಂತಾಗಿದೆ.

https://newsnotout.com/2024/01/puttur-eshwaramangala-student/
https://newsnotout.com/2024/01/rama-mandira-news-live/
See also  10 ದಿನಗಳಲ್ಲಿ 21 ಜನರಿಗೆ ಮಂಗನ ಕಾಯಿಲೆ..! ಇಬ್ಬರು ಮಂಗಳೂರು ಮತ್ತು ಮಣಿಪಾಲ ಆಸ್ಪತ್ರೆಗೆ ದಾಖಲು!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget