Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಕಾಲೇಜಿನಲ್ಲಿ ಫೋನ್​ ಕಸಿದುಕೊಂಡ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಲ್ಲಿ ಹೊಡೆದ ವಿದ್ಯಾರ್ಥಿನಿ..! ವಿಡಿಯೋ ವೈಲರ್

1.3k

ನ್ಯೂಸ್ ನಾಟೌಟ್: ಶಿಕ್ಷಕನ್ನು ದೇವರೆಂದು ಗೌರವಿಸಲಾಗುತ್ತದೆ. ಇಲ್ಲೊಬ್ಬಳು ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡರು ಎಂಬ ಕಾರಣಕ್ಕೆ ತನ್ನ ಚಪ್ಪಲಿಯಲ್ಲೇ ತನ್ನ ಗುರುವಿಗೆ ಕಪಾಳಮೋಕ್ಷ ಮಾಡಿದ್ದಾಳೆ.

ಈ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​​​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿದೆ. ವಿದ್ಯಾರ್ಥಿನಿ ತರಗತಿಯಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದನ್ನು ಕಂಡ ಶಿಕ್ಷಕಿ ಆಕೆಯಿಂದ ಫೋನ್​​ ಕಸಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ನೇರವಾಗಿ ತನ್ನ ಶಿಕ್ಷಕಿಯ ಮೇಲೆಯೇ ಕೈ ಮಾಡಿದ್ದಾಳೆ.

ಕಾಲೇಜಿನ ಕ್ಯಾಂಪಸ್ ​​​ನಲ್ಲೇ ನೂರಾರು ವಿದ್ಯಾರ್ಥಿಗಳ ಮುಂದೆ ಶಿಕ್ಷಕಿಗೆ ಚಪ್ಪಲಿಯಲ್ಲಿ ಹೊಡೆದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಇದಲ್ಲದೇ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ಶಬ್ದಗಳಿಂದ ಬೈಯುತ್ತಿರುವುದನ್ನು ಕಾಣಬಹುದು.

ಅಲ್ಲೇ ಇದ್ದ ವಿದ್ಯಾರ್ಥಿಯೊಬ್ಬರು ಈ ಘಟನೆಯನ್ನು ತಮ್ಮ ಮೊಬೈಲ್‌ ನಲ್ಲಿ ಸೆರೆಹಿಡಿದಿದ್ದಾರೆ. ಅಷ್ಟೇ ಅಲ್ಲ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಘು ಕಾಲೇಜು ಆಡಳಿತ ಮಂಡಳಿ ವಿಚಾರಣೆ ನಡೆಸಿದ್ದು,ವಿದ್ಯಾರ್ಥಿನಿ ಕೋಪಗೊಂಡು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾಳೆಂದು ತಿಳಿದುಬಂದಿದೆ. ಶಿಕ್ಷಕಿಯ ಮೇಲೆ ಕೈ ಮಾಡಿದ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಅಮಾನತ್ತುಗೊಳಿಸಲಾಗಿದೆ.

ಪಾಕ್ ಪ್ರಜೆಗಳನ್ನು ಪತ್ತೆ ಹಚ್ಚುವ ವೇಳೆ ಬಾಂಗ್ಲಾದ 500ಕ್ಕೂ ಹೆಚ್ಚು ಅಕ್ರಮ ವಲಸಿಗರು ಪತ್ತೆ..! ಬಂಧಿಸಿದ ಪೊಲೀಸರು..!

See also  ಲಾರಿ ಚಾಲನೆಯಲ್ಲಿರುವಾಗ ಬಾಧಿಸಿದ ಮೂರ್ಛೆ ರೋಗ, ಪೆಟ್ರೋಲ್ ಬಂಕ್ ಗೆ ನುಗ್ಗಿದ ಲಾರಿ !
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget