ಕ್ರೈಂ

ಮೊಬೈಲ್‌ಗಾಗಿ ಹೆತ್ತ ತಾಯಿಯನ್ನೇ ಕೊಂದ ಮಗ..!

ನ್ಯೂಸ್ ನಾಟೌಟ್ :ಮೊಬೈಲ್ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಂದಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ಫಾತಿಮಾ ಮೇರಿ (45) ಎಂಬುವವರು ಮೃತಪಟ್ಟವರು. ಈ ಸಂಬಂಧ ಮಗ ದೀಪಕ್ ಎಡ್ವಿನ್ ನನ್ನು (26) ಪೊಲೀಸರು ಬಂಧಿಸಿದ್ದಾರೆ.

ಮೈಲಸಂದ್ರ ನಿವಾಸಿ ಫಾತಿಮಾ, ಪತಿ ಸ್ವಾಮಿ ಹಾಗೂ ಮಗ ದೀಪಕ್ ಎಡ್ವಿನ್ ಜೊತೆ ನೆಲೆಸಿದ್ದರು. ಟಚ್‌ ಸ್ಕ್ರೀನ್ ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ಆರೋಪಿ ದೀಪಕ್, ತಾಯಿ ಫಾತಿಮಾ ಅವರನ್ನು ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಬೇಗೂರು ಪೊಲೀಸರು ಹೇಳಿದರು.

‘ಕೃತ್ಯದ ಬಳಿಕ ತಾಯಿ ಬಳಿಯಿದ್ದ ₹ 800 ಸಮೇತ ಆರೋಪಿ ಪರಾರಿಯಾಗಿದ್ದ. ಸ್ಥಳೀಯರು ನೀಡಿದ್ದ ಮಾಹಿತಿ ಹಾಗೂ ಕೆಲ ಪುರಾವೆಗಳನ್ನು ಆಧರಿಸಿ ಗುರುವಾರ ರಾತ್ರಿಯೇ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದೂ ತಿಳಿಸಿದರು.

Related posts

ಪ್ರಜ್ವಲ್ ರೇವಣ್ಣನ ವಿದೇಶದಿಂದ ವಿಡಿಯೋ ಮೂಲಕ ಪ್ರತ್ಯಕ್ಷ..! ತಾತನ ಎಚ್ಚರಿಕೆಗೆ ಹೆದರಿದನಾ ಮೊಮ್ಮಗ..? ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಹೇಳಿದ್ದೇನು..?

ರಜೆ ನೀಡಲು ನಿರಾಕರಿಸಿದ್ದಕ್ಕೆ ಚೂರಿಯಿಂದ ಇರಿದ ಸರ್ಕಾರಿ ನೌಕರ..! ಇಬ್ಬರ ಸ್ಥಿತಿ ಗಂಭೀರ..!

ಸುಳ್ಯ ಮೂಲದ ವಿವಾಹಿತ ಮಹಿಳೆಗೆ ತಡರಾತ್ರಿ ಫೋನ್ ಕರೆ ಮಾಡಿ ಕಾಮುಕನ ಕಾಟ..!, ಕಿರಿಕಿರಿ ತಡೆಯಲಾರದೆ ಪೊಲೀಸ್ ಠಾಣೆ ಮೆಟ್ಟಿಲೇರಿ ಬೆಂಡೆತ್ತಿದ ಮಹಿಳೆ