ನ್ಯೂಸ್ ನಾಟೌಟ್: ಓರ್ವ ತಾಯಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಮೈ ಮರೆತು ತನ್ನ ಮಗುವನ್ನು ಪಾರ್ಕ್‌ನಲ್ಲಿಯೇ ಬಿಟ್ಟು ಹೋಗಿದ್ದಾಳೆ. ನಂತರ ಯಾರೋ ಬಂದು ಮಗುವನ್ನು ಆಕೆಯ ಕೈಗೊಪ್ಪಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ವೈರಲ್ ದೃಶ್ಯವನ್ನು ಕಂಡು ಇದು ಸ್ಕ್ರಿಪ್ಟೆಡ್ ವಿಡಿಯೋ ಆಗಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ತಾಯಿ ಫೋನಿನಲ್ಲಿ ಮಾತಾಡ್ತಾ ಮಗುವನ್ನು ಬಿಟ್ಟು ಸೀದಾ ಹೋಗಿದ್ದು, ನಂತರ ಓರ್ವ ಪುರುಷ ಮಗುವನ್ನು ತಂದು ತಾಯಿಯ ಕೈಗೆ ಒಪ್ಪಿಸಿದ್ದಾರೆ. ಹಲವು ಜನ ದೃಶ್ಯವನ್ನು ಕಂಡು ಏನಪ್ಪಾ ತಾಯಿಗೆ ಒಂಚೂರು ಜವಬ್ದಾರಿ ಬೇಡ್ವಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಇದು ನಿಜ ಘಟನೆಯಲ್ಲ ಬದಲಿಗೆ ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಮತ್ತು ಸೀರಿಯಲ್ ಶೂಟಿಂಗ್ ದೃಶ್ಯವಾಗಿದೆ ಎಂದು ಕೆಲವರು ಹೇಳಿದ್ದಾರೆ.
https://x.com/News_Not_Out/status/1899387846269845978
ಇದನ್ನೂ ಓದಿ:‘ಡೆವಿಲ್’ ಶೂಟಿಂಗ್ ಗೆ ದರ್ಶನ್ ಮತ್ತೆ ಎಂಟ್ರಿ..! ಶೂಟಿಂಗ್ ವೇಳೆ ಭದ್ರತೆಗೆ 32 ಪೊಲೀಸ್ ಸಿಬ್ಬಂದಿ ನಿಯೋಜನೆ..!
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, “ತಾಯಿ ತನ್ನ ಮಗುವನ್ನು ಪಾರ್ಕ್‌ನಲ್ಲಿಯೇ ಮರೆತು ಬಿಟ್ಟು ಹೋಗಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.