ವೈರಲ್ ನ್ಯೂಸ್

ಈ ಆ್ಯಪ್ ಗಳು ಫೋನ್‌ ನಲ್ಲಿದ್ರೆ ಮನೆಯಲ್ಲಿ ಸೊಳ್ಳೆಗಳು ಹತ್ತಿರ ಬರಲ್ಲ! ಈ ಆ್ಯಪ್ ಗಳು ಹೇಗೆ ಕೆಲಸ ಮಾಡುತ್ತವೆ?

ನ್ಯೂಸ್ ನಾಟೌಟ್ : ಸ್ಮಾರ್ಟ್‌ಫೋನ್‌ ಮೂಲಕ ಕರೆ ಹಾಗೂ ಮೆಸೆಜ್‌ ಅನ್ನು ಹೊರತುಪಡಿಸಿ ಬ್ಯಾಂಕಿಂಗ್‌ ವ್ಯವಹಾರ ಮಾಡಬಹುದು, ಆನ್‌ಲೈನ್‌ ಶಾಫಿಂಗ್‌ ಮಾಡಬಹುದು ಹಾಗೂ ಇನ್ನೂ ಹೆಚ್ಚಿನ ಸೇವೆಗಳನ್ನು ಪಡೆದುಕೊಳ್ಳಬಹುದು. ಈಗ ಸೊಳ್ಳೆಗಳನ್ನೂ ಸಹ ಓಡಿಸಬಹುದು.

ಹೌದು, ಮಳೆಗಾಲ ಆರಂಭ ಆಗಿರುವುದರಿಂದ ಸೊಳ್ಳೆಗಳ ಸಂಖ್ಯೆ ಸಹ ಹೆಚ್ಚಾಗಿದೆ. ಈ ಸೊಳ್ಳೆಗಳ ನಿಯಂತ್ರಣಕ್ಕೆ ಸಾಮಾನ್ಯವಾಗಿ ಮನೆಯಲ್ಲಿ ವಿವಿಧ ರೀತಿಯ ಉಪಕರಣಗಳನ್ನು ಅಥವಾ ಸೊಳ್ಳೆ ಬ್ಯಾಟ್‌ ಬಳಕೆ ಮಾಡುತ್ತಿರಬಹುದು. ಈ ನಡುವೆ ಫೋನ್ ಮೂಲಕವೇ ಸೊಳ್ಳೆಗಳನ್ನು ಓಡಿಸಬಹುದು ಎಂಬುದು ವಿಶೇಷ.
ಸ್ಮಾರ್ಟ್‌ಫೋನ್‌ ಹೊಂದಿರುವ ಯಾರೇ ಆದರೂ ಹಲವಾರು ಆಪ್‌ಗಳನ್ನು ಬಳಕೆ ಮಾಡಿಕೊಂಡು ವಿವಿಧ ರೀತಿಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಈ ಸೊಳ್ಳೆ ವಿರುದ್ಧ ಹೋರಾಡಲು ಅಥವಾ ಸೊಳ್ಳೆಗಳು ನಿಮ್ಮ ಹತ್ತಿರಕ್ಕೆ ಬರದಂತೆ ಮಾಡಲು ಆಪ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

ಈ ಆಪ್‌ಗಳು ಆಪ್‌ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯ ಇದ್ದು, ಇವುಗಳನ್ನು ಸಕ್ರಿಯವಾಗಿ ಬಳಕೆ ಮಾಡುವ ಮೂಲಕ ಸ್ವಲ್ಪ ಮಟ್ಟದಲ್ಲಾದರೂ ಸೊಳ್ಳೆಗಳನ್ನು ನಿಮ್ಮಿಂದ ದೂರ ಇರುತ್ತವೆ. ಈ ಸಂಬಂಧ ಪ್ಲೇ ಸ್ಟೋರ್‌ನಲ್ಲಿ ಹಲವಾರು ಆಪ್‌ಗಳು ಲಭ್ಯವಿದ್ದು, ಅದರಲ್ಲಿ ಪ್ರಮುಖವಾಗಿ ಮಸ್ಕಿಟೋಸ್‌ ಕಿಲ್ಲರ್, ಮಸ್ಕಿಟೋಸ್‌ ವಾಯ್ಸ್‌, ಫ್ರೀಕ್ವೆನ್ಸಿ ಜನರೇಟರ್ ಸೇರಿದಂತೆ ಮುಂದಾದ ಆಪ್‌ ಗಳು ಹೆಚ್ಚು ಬಳಕೆ ಆಗುತ್ತಿವೆ. ಈ ಆ್ಯಪ್ಳನ್ನು ಇನ್‌ಸ್ಟಾಲ್‌ ಮಾಡುವಾಗ ಒಮ್ಮೆ ವಿಮರ್ಶೆ ಹಾಗೂ ರೇಟಿಂಗ್‌ ನೋಡಿ ಇನ್‌ಸ್ಟಾಲ್‌ ಮಾಡಿಕೊಳ್ಳಿ ಎನ್ನುವುದು ನಮ್ಮ ಅಭಿಪ್ರಾಯ.

ಸಾಮಾನ್ಯವಾಗಿ ಪ್ರತಿ ಪ್ರಾಣಿ ಹಾಗೂ ಪಕ್ಷಿಗಳು ಕೆಲವು ಶಬ್ದಕ್ಕೆ ಹೆದರುವುದುಂಟು. ಇದರ ಆಧಾರದಲ್ಲಿಯೇ ಈ ಆಪ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಇವು ವಿಭಿನ್ನ ಫ್ರೀಕ್ವೆನ್ಸಿ ಶಬ್ದಗಳನ್ನು ಉತ್ಪಾದಿಸುತ್ತವೆ. ಈ ಸೌಂಡ್‌ ಸೊಳ್ಳೆಗಳನ್ನು ಇನ್ನಿಲ್ಲದಂತೆ ಕಾಡಲಿದ್ದು, ಈ ಶಬ್ದದಿಂದ ದೂರ ಹೋಗಲು ಮುಂದಾಗುತ್ತವೆ ಎನ್ನಲಾಗಿದೆ. ಜೊತೆಗೆ ಈ ಸೌಂಡ್‌ ಕಡಿಮೆ ಇರುವುದರಿಂದ ಮನುಷ್ಯರಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಈ ಆಪ್‌ಗಳು ಖಂಡಿತಾ ನೂರಕ್ಕೆ ನೂರರಷ್ಟು ಕೆಲಸ ಪರಿಣಾಮ ಬೀರುವುದಿಲ್ಲ. ಬದಲಾಗಿ ಸ್ವಲ್ಪ ಮಟ್ಟಿನ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ.

Related posts

ಭಾರತದ ಬೀದಿ ನಾಯಿ ಜೊತೆ ವಿದೇಶಿ ಮಹಿಳೆಗೆ ಲವ್ ಆದದ್ದು ಹೇಗೆ? ಶ್ವಾನಕ್ಕೂ ಪಾಸ್ಪೋರ್ಟ್ ವೀಸಾ ಮಾಡಿಸಿದ್ದಾರಾ..? ಯಾವ ದೇಶಕ್ಕೆ ಹಾರಲಿದೆ ಭಾರತದ ಶ್ವಾನ? ಇಲ್ಲಿದೆ ವೈರಲ್ ವಿಡಿಯೋ

ಸರ್ವರೋಗಕ್ಕೂ ಹಾವಿನ ರಕ್ತ ರಾಮಬಾಣವಂತೆ ..! ಇಲ್ಲಿನ ಜನ ಆರೋಗ್ಯಕ್ಕಾಗಿ ಗಟಗಟನೆ ರಕ್ತ ಕುಡಿಯುತ್ತಾರೆ ಗೊತ್ತಾ?

Cat: ಮೊದಲ ಮಹಡಿಯಲ್ಲಿ ಸಿಲುಕಿದ್ದ ಬೆಕ್ಕು..! ರಕ್ಷಣಾ ಕಾರ್ಯಾಚರಣೆಗೆ ಬಂದ ಸಿಬ್ಬಂದಿಗೆ ಶಾಕ್..! ಇಲ್ಲಿದೆ ವೈರಲ್ ವಿಡಿಯೋ